LATEST NEWS
ಮಂಗಳೂರು – ಮುಡಾ ಕಚೇರಿಯಲ್ಲಿ ಬ್ರೋಕರ್ ಕಾರುಭಾರು ವಿಡಿಯೋ ವೈರಲ್!
ಮಂಗಳೂರು ಜನವರಿ 09: ಮಂಗಳೂರಿನ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ವ್ಯಕ್ತಿಯೊಬ್ಬರು ಅಧಿಕಾರಿಯ ಕೊಠಡಿಗೆ ನುಗ್ಗಿ ಕಡತಗಳನ್ನು ಫೋರ್ಜರಿ ಮಾಡುತ್ತಿರುವ ಸಿ ರೆ ಸಿಸಿ ಕ್ಯಾಮರಾದ ವಿಡಿಯೋ ತುಣುಕು ಬುಧವಾರ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದು ಮೂಡ ಕಚೇರಿಯಲ್ಲಿ ಬ್ರೋಕರ್ ಹಾವಳಿ ದಿನೇ ದಿನೇ ಜಾಸ್ತಿಯಾಗುತ್ತಿರುವ ಬಗ್ಗೆ ನಾಗರಿಕರ ಆರೋಪಕ್ಕೆ ಪುಷ್ಠಿ ನೀಡುವಂತಿದೆ. ಅಗಂತುಕ ವ್ಯಕ್ತಿಯೊಬ್ಬರು ಮೂಡ ಅಧಿಕಾರಿಯೊಬ್ಬರ ಕೊಠಡಿ ಪ್ರವೇಶಿಸುತ್ತಾರೆ. ಮೇಜಿನ ಮೇಲಿರುವ ಕಡತ ಪರಿಶೀಲನೆ ನಡೆಸುತ್ತಾರೆ. ಬಳಿಕ ಕಡತವನ್ನು ಬದಲಾಯಿಸುತ್ತಿರುವ ದೃಶ್ಯ ಕಾಣುತ್ತದೆ. ಹೀಗಾಗಿ ಇದು ಬೋಕರ್‌ಗಳು ಅಧಿಕಾರಿಗಳು ಕೊಠಡಿಯಲ್ಲಿ ಇಲ್ಲದ ವೇಳೆ ಪ್ರವೇಶಿಸಿ ತಮಗೆ ಬೇಕಾದಂತೆ ಕಡತಗಳ ತಿದ್ದುಪಡಿ ಅಥವಾ ಕಡತಗಳ ನಾಪತ್ತೆ ಮಾಡುತ್ತಿರುವ ಬಗ್ಗೆ ನಾಗರಿಕರಲ್ಲಿ ಶಂಕೆ ಮೂಡುವಂತೆ ಈ ಘಟನೆಯ ದೃಶ್ಯಾವಳಿಗಳು ಕಂಡುಬರುತ್ತಿವೆ.
ಕಡತವನ್ನು ಫೋರ್ಜರಿ ಮಾಡುತ್ತಿರುವ ವಿದ್ಯಮಾನ ಮಂಗಳವಾರ ಮಧ್ಯಾಹ್ನ ನಡೆದಿರುವ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಕಾಣುತ್ತಿದೆ. ಮೂಡ ಕಚೇರಿಯಲ್ಲಿ ನಾಗರಿಕರ ಕೆಲಸ ಮಾಡಲು ಸತಾಯಿಸಲಾಗುತ್ತಿದೆ ಎಂಬ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬರುತ್ತಿದೆ.