DAKSHINA KANNADA
ಮರೆವು ಜಾಗೃತಿಯಲ್ಲಿ ಮೇಯರ್ ಡ್ಯಾನ್ಸ್
ಮರೆವು ಜಾಗೃತಿಯಲ್ಲಿ ಮೇಯರ್ ಡ್ಯಾನ್ಸ್
ಮಂಗಳೂರು,ಸೆಪ್ಟಂಬರ್ 24: ಮರೆವು ರೋಗದ ಕುರಿತು ಜಾಗೃತಿ ಮೂಡಿಸುವ ಉದ್ಧೇಶದಿಂದ ಮಂಗಳೂರಿನ ಫಾರಂ ಫೀಜ್ಙಾ ಮಾಲ್ ಆಶ್ರಯದಲ್ಲಿ ಇಂದು ಮಂಗಳೂರಿನಲ್ಲಿ ದಿ ಪರ್ಪಲ್ ರನ್ ಮ್ಯಾರಥಾನ್ ಏರ್ಪಡಿಸಲಾಗಿತ್ತು.
ಈ ಮ್ಯಾರಥಾನ್ ನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಕೂಡಾ ಭಾಗಿಯಾಗಿದ್ದರು.3 ಕಿಲೋ ಮೀಟರ್ ದೂರದ ಮ್ಯಾರಥಾನ್ ನಲ್ಲಿ ಭಾಗಿಯಾದ ಕವಿತಾ ಸನಿಲ್ ಓಟಗಾರರಿಗೆ ಸ್ಪೂರ್ತಿಯನ್ನೂ ತುಂಬಿದರು. ಬಳಿಕ ನಡೆದ ವಾರ್ಮ್ ಅಪ್ ಡ್ಯಾನ್ಸ್ ನಲ್ಲಿ ಹೆಜ್ಜೆ ಹಾಕಿ ಕುಣಿಯುವ ಮೂಲಕ ಮೇಯರ್ ಎಲ್ಲರ ಗಮನವನ್ನು ತಮ್ಮೆಡೆಗೆ ಸೆಳೆದರು.
ಪರ್ಪಲ್ ಟೀ ಶರ್ಟ್ ಜೊತೆಗೆ ಸ್ಪೋರ್ಟ್ಸ್ ಶಾಟ್ಸ್ ನಲ್ಲಿ ಬಂದಿದ್ದ ಮೇಯರ್ ತನ್ನ ಸ್ನೇಹಿತರ ಜೊತೆ ಸೇರಿ ಮೈ ಕೈಯಾಡಿಸಿ ಕುಣಿದರು. ತಮ್ಮೊಂದಿಗೆ ಕುಣಿದ ಮೇಯರ್ ಜೊತೆಗೆ ಕೆಲವು ಓಟಗಾರರು ಸೆಲ್ಫಿಯನ್ನೂ ತೆಗೆದರು.
ಮೇಯರ್ ವೇದಿಕೆಯ ಕೆಳಗೆ ಡ್ಯಾನ್ಸ್ ಮಾಡಿದರೆ, ವೇದಿಕೆಯಲ್ಲಿ 88 ವರ್ಷದ ಹಿರಿಯರು ಸೇರಿದಂತೆ ಹಿರಿಯ ನಾಗರಿಕರು ತಾಳಕ್ಕೆ ತಕ್ಕ ಡ್ಯಾನ್ಸ್ ಮಾಡುವ ಮೂಲಕ ಕಿರಿಯರಿಗೆ ಉತ್ಸಾಹ ತುಂಬಿದರು.
ವಿಡಿಯೋ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ: