LATEST NEWS
ಮಂಗಳೂರು ಮೇಯರ್ ಉಪಮೇಯರ್ ಆದರೂ ಅಧಿಕಾರ ಇಲ್ಲ – ಕೊನೆಗೆ ಸಿಗುವುದು ಕೇವಲ 154 ದಿನ ಮಾತ್ರ..!!
ಮಂಗಳೂರು ಸೆಪ್ಟೆಂಬರ್ 21: ಮಂಗಳೂರು ಮಹಾನಗರಪಾಲಿಕೆಗೆ ನೂತನ ಮೇಯರ್ ಆಗಿ ಮನೋಜ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಪಿ.ಎಸ್. ಆಯ್ಕೆಯಾಗಿದ್ದಾರೆ. ಆದರೆ ಇಬ್ಬರು ಆಯ್ಕೆಯಾದ ಕೆಲವೆ ಗಂಟೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಪ್ರಾರಂಭವಾಗಿದ್ದು. ಇಬ್ಬರಿಗೂ ಅಧಿಕಾರ ಸಿಕ್ಕರೂ ಚಲಾಯಿಸುವಂತಿಲ್ಲ. ಅಲ್ಲದೆ ವಿಧಾನಪರಿಷತ್ ಚುನಾವಣೆ ಮುಗಿದ ಬಳಿಕ ಸಿಗುವುದು ಕೇವಲ 154 ದಿನ ಮಾತ್ರ.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಮನೋಜ್ ಕೋಡಿಕಲ್ ಮತ್ತು ಉಪಮೇಯರ್ ಆಗಿ ಭಾನುಮತಿ ಅವರು ಗುರುವಾರ ಮಧ್ಯಾಹ್ನ 1.45ಕ್ಕೆ ಅಧಿಕಾರ ಸ್ವೀಕರಿಸಿದರು. ಬಳಿಕ ಅಭಿನಂದನೆ ಸ್ವೀಕರಿಸಿ, ನಗರದ ನಾನಾ ಕಡೆ ಮೆರವಣಿಗೆಯಲ್ಲಿಹೊರಟಿದ್ದರು. ಸಂಜೆ 3.45ರ ವೇಳೆಗೆ ಚುನಾವಣಾ ನೀತಿ ಸಂಹಿತೆ ಆದೇಶ ಹೊರಡಿಸಲಾಗಿದ್ದು, ಕೇವಲ 2 ಗಂಟೆಯಲ್ಲೇ ಇಬ್ಬರೂ ತಮ್ಮ ಕಾರುಗಳನ್ನು ಬಿಟ್ಟುಕೊಡಬೇಕಾಯಿತು.
ನೂತನ ಮೇಯರ್ ಮತ್ತು ಉಪಮೇಯರ್ ಅವರ ಅಧಿಕಾರ ಅವಧಿ 2025ರ ಫೆ.27ರವರೆಗೆ ಇದ್ದು, ಇದರಿಂದ ನೂತನವಾಗಿ ಆಯ್ಕೆಯಾದವರಿಗೆ ಕೇವಲ ಐದೂವರೆ ತಿಂಗಳಷ್ಟೇ ಸಿಗಲಿದೆ. ಆದರೆ ಈ ಮಧ್ಯೆ ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ ಅವರ ಸ್ಥಾನಕ್ಕೆ ಚುನಾವಣೆ ಘೋಷಣೆಯಾದ ಕಾರಣ ನೀತಿ ಸಂಹಿತೆ ಶಾಕ್ ನೀಡಿದೆ. ಲೆಕ್ಕಪ್ರಕಾರ 193 ದಿನಗಳ ಕಾಲ ಮೇಯರ್ ಆಡಳಿತ ನಡೆಸಬೇಕಿದ್ದರೂ, ಹೊಸ ಮೇಯರ್‌ಗೆ ನೀತಿ ಸಂಹಿತೆ ಮುಗಿದ ಬಳಿಕ ಸಿಗುವುದು ಕೇವಲ 154 ದಿನಗಳು ಮಾತ್ರ.