LATEST NEWS
ಮಂಗಳೂರು – ಲವರ್ ಔಟಿಂಗ್ ಬರಲಿಲ್ಲವೆಂದು ಪಿಜಿಗೆ ಕಲ್ಲೆಸೆದ ಯುವಕನಿಗೆ ಬಿತ್ತು ಧರ್ಮದೇಟು
ಮಂಗಳೂರು ನವೆಂಬರ್ 03: ತನ್ನ ಲವರ್ ಔಟಿಂಗ್ ಗೆ ಕರೆದರೆ ಬರಲಿಲ್ಲ ಎಂದು ಸಿಟ್ಟಿಗೆದ್ದ ಯುವಕನೊಬ್ಬ ಆಕೆ ಕೆಲಸಕ್ಕಿದ್ದ ಪಿಜಿಗೆ ಕಲ್ಲು ತೂರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜು ಬಳಿ ನಡೆದಿದೆ.
ಕಲ್ಲು ಹೊಡೆ ಯುವಕನನ್ನು ಸುಳ್ಯ ನಿವಾಸಿ ವಿವೇಕ್ (18) ಎಂದು ಗುರುತಿಸಲಾಗಿದೆ. ಈತ ಸೆಂಟ್ ಆಗ್ನೇಸ್ ಕಾಲೇಜ್ ಬಳಿ ಇರುವ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಆಕೆಗೆ ಔಟಿಂಗ್ ಗೆ ಬರಲು ಹೇಳಿದ್ದ ಆದರೆ ಯುವತಿ ಔಟಿಂಗ್ ಬರಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪ್ರಿಯಕರ ವಿವೇಕ್, ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ. ಘಟನೆಯಲ್ಲಿ ಕಟ್ಟಡದ ಗಾಜು ಪುಡಿಯಾಗಿದ್ದು, ಸಾರ್ವಜನಿಕರು ವಿವೇಕ್ನನ್ನು ಹಿಡಿದು ಥಳಿಸಿದ್ದಾರೆ.
You must be logged in to post a comment Login