LATEST NEWS
ಮಂಗಳೂರು: ಮಹಾಮಾಯ ರಥೋತ್ಸವ ಸಂಪನ್ನ

ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ಬ್ರಹ್ಮರಥೋತ್ಸವ ಮಂಗಳವಾರ ಸಹಸ್ರಾರು ಭಜಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.


ಚಿತ್ರ : ಮಂಜು ನೀರೇಶ್ವಾಲ್ಯ
ಬೆಳಿಗ್ಗೆ ಮಹಾಪ್ರಾರ್ಥನೆ ಬಳಿಕ ಶ್ರೀ ದೇವರಿಗೆ ಶತ ಕಲಶಾಭಿಷೇಕ , ಗಂಗಾಭಿಷೇಕ , ಪುಳಕಾಭಿಷೇಕ , ಕನಕಾಭಿಷೇಕ ಗಳು ನಡೆದವು , ಯಜ್ಞ ಮಂಟಪದಲ್ಲಿ ಮಹಾ ಪೂರ್ಣಾಹುತಿ ನೆರವೇರಿತು ಸಾಯಂಕಾಲ ಬೆಳ್ಳಿ ಪಲ್ಲಕಿಯಲ್ಲಿ ಶ್ರೀ ದೇವರು ವಿರಾಜಮಾನರಾಗಿ ರಥಾರೋಹಣ ನೆರೆದ ಭಜಕರಿಗೆ ಸೇವಾ ಪ್ರಸಾದ ವಿತರಣೆ ಬಳಿಕ ರಥ ಎಳೆದು ವಿಜೃಂಭಣೆಯಿಂದ ನೆರವೇರಿತು .

ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಸಿ . ಎ . ಶ್ರೀನಿವಾಸ್ ಕಾಮತ್ , ಮಾರೂರ್ ಸುಧೀರ್ ಪೈ , ಪ್ರಕಾಶ್ ಕಾಮತ್ , ಅನಂತ್ ಭಟ್ , ಗಣೇಶ್ ಭಟ್ , ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉಪಸ್ಥಿತರಿದ್ದರು .