Connect with us

    LATEST NEWS

    ಮಂಗಳೂರು : ಮೂಲ್ಕಿಯಲ್ಲಿ ಮನೆಯ ಅಡಿಗೆ ಕೋಣೆಗೆ ನುಗ್ಗಿದ ಚಿರತೆ..!

    ಮಂಗಳೂರು: ಮಂಗಳೂರು ಸುತ್ತಮುತ್ತ ಚಿರತೆಗಳ ಹಾವಳಿ ಜಾಸ್ತಿಯಾಗಿದ್ದು ನಾಯಿ, ಕೋಳಿ, ದನಕರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆಗಳು ಇದೀಗ ಒಂದು ಹಂತ ದಾಟಿ ಮನೆಗೆ ನುಗ್ಗಲು ಆರಂಭಿಸಿವೆ.

    ಇಂತಹುದೇ ಘಟನೆ ಮಂಗಳೂರು ಹೊರವಲಯದ ಮೂಲಕ್ಕಿಯಲ್ಲಿ ನಡೆದಿದೆ. ಏಕಾಏಕಿ ಚಿರತೆಯೊಂದು (Leopard) ಮೂಲ್ಕಿಯ ಅಕ್ಕಸಾಲಿಗರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಅಡುಗೆ ಕೋಣೆ ನುಗ್ಗಿದೆ.  ಸದಾನಂದ ಕೋಟ್ಯಾನ್‌ ಎಂಬವರ  ಮನೆಯ ಅಡುಗೆ ಕೋಣೆಗೆ ಸುಮಾರು ಒಂದು ವರ್ಷ ಪ್ರಾಯದ ಚಿರತೆ ನುಗ್ಗಿದೆ. ಈ ವೇಳೆ ನಾಯಿ ಬೊಗಳಲು ಆರಂಭಿಸಿದ್ದು, ಮನೆಮಂದಿ ಚಿರತೆ ನೋಡಿ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಅಡುಗೆ ಮನೆಯ ಮುಂಭಾಗ ಬಾಗಿಲಿಗೆ ಬೋನ್ ಅಳವಡಿಸಿ ಸುಮಾರು 5 ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆ ಬೋನಿನೊಳಗೆ ಬಿದ್ದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply