Connect with us

    DAKSHINA KANNADA

    ಮಂಗಳೂರು : ಡಿ.15 ರಂದು ನಗರದಲ್ಲಿ ವಿದ್ಯಾರ್ಥಿಗಳಿಗಾಗಿ ವೃತಿ ಆಯ್ಕೆ ಕುರಿತ ವಿಚಾರ ಸಂಕಿರಣ

    ಮಂಗಳೂರು : ಮಂಗಳೂರಿನ ಸಂತ ಅಗ್ನೆಸ್ ಪದವಿ ಪೂರ್ವ ಕಾಲೇಜು ಮತ್ತು ವಿವಿಧ್ಯ ಮಂಗಳೂರು ಇವರ ಸಹಭಾಗಿತ್ವದಲ್ಲಿ ‘Pathway to Possibilities: Career Choices After std 10 & 10+2’ (ಸಾಧ್ಯತೆಗಳ ಹಾದಿ : ಹತ್ತನೇ ತರಗತಿ ಮತ್ತು ಹತ್ತನೇ ತರಗತಿಯ ನಂತರದ ವೃತ್ತಿ ಆಯ್ಕೆಗಳು) ಎಂಬ ಅತ್ಯುತ್ತಮ ವಿಶಿಷ್ಟ ವಿಚಾರ ಸಂಕಿರಣ ವನ್ನು ನಗರದ ಬೆಂದೂರು ಸಂತ ಆಗ್ನೆಸ್ ಪಿಯು ಕಾಲೇಜಿನ ಆಡಿಟೋರಿಯಂ ನಲ್ಲಿ ಇದೇ ಬರುವ ಡಿಸೆಂಬರ್ 15 ರಂದು ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 12.30 ರ ವರೆಗೆ ಆಯೋಜನೆ ಮಾಡಲಾಗಿದೆ.

    ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಲೇಖಕ, ಪ್ರೊಫೆಸರ್, ಪ್ರಸಿದ್ಧ ವೃತ್ತಿ ಮಾರ್ಗದರ್ಶಕ ತಜ್ಞ ಮತ್ತು ಪ್ರೇರಕ ಭಾಷಣಕಾರ ಡಾ. ಅನಂತ್ ಪ್ರಭು ಅವರು ವಿಸ್ತೃತ ವೃತ್ತಿ ಮಾರ್ಗದರ್ಶನ ನೀಡಲಿದ್ದಾರೆ. ಜೊತೆಗೆ ಐಐಟಿಯನ್ಸ್,(IITians) , ಎನ್ಐಟಿಯನ್ಸ್(NITians) ಮತ್ತು ಖ್ಯಾತ ವೈದ್ಯ( Doctors) ರೊಂದಿಗೆ ಸಂವಹನ ಕಾರ್ಯಕ್ರಮ ಕೂಡ ನಡೆಯಲಿದೆ. ಜೊತೆಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ಚರ್ಚೆಗಳು ( Panel Discussions)ಗಳು ನಡೆಯಲಿವೆ.

    ಸಂತ ಆಗ್ನೆಸ್ ಪದವಿ ಪೂರ್ವ ಕಾಲೇಜು ಮತ್ತು ವಿವಿಧ್ಯ ಈ ಅಪರೂಪದ ಮತ್ತು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಈ ಅತ್ಯಗತ್ಯದ ವಿಶೇಷ ಕಾರ್ಯಕ್ರಮವನ್ನು ರೂಪಿಸಿದೆ. NEET, JEE ಮತ್ತು CET ಗಳಲ್ಲಿ ಯಶಸ್ಸಿಗೆ ವಿನ್ಯಾಸಗೊಳಿಸಲಾದ ಏಕೀಕೃತ ತರಬೇತಿಯ ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ಒದಗಿಸುವ ವೇದಿಕೆಯಾಗಲಿದೆ. ಈ ವಿಚಾರ ಸಂಕೀರಣವು ಎಂಜಿನಿಯರಿಂಗ್ ಮತ್ತು ಔಷಧಶಾಸ್ತ್ರದಂತಹ ಪ್ರಮುಖ ಕ್ಷೇತ್ರಗಳಲ್ಲಿ ಆಳವಾದ ಒಳನೋಟವನ್ನು ನೀಡುತ್ತದೆ, ಜೊತೆಗೆ NEET, JEE ಮತ್ತು CET ಗಳಿಗೆ ಸಿದ್ಧತೆಗಾಗಿ ಗಮನ ಹರಿಸುತ್ತದೆ.

    ಈ ವಿಚಾರ ಸಂಕೀರ್ಣದಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಹತ್ತನೇ ತರಗತಿಯ ನಂತರ ವಿಭಿನ್ನ ವೃತ್ತಿ ಅವಕಾಶಗಳನ್ನು ಅನ್ವೇಷಿಸಬಹುದು ಮತ್ತು ಸರಿಯಾದ ಶೈಕ್ಷಣಿಕ ಮಾರ್ಗವನ್ನು ಕಂಡುಹಿಡಿಯಬಹುದು.

    ಮುಂಚಿತ ನೋಂದಣಿ ಕಡ್ಡಾಯವಾಗಿದ್ದು ಕೇವಲ ರೂ. 50/- ಮಾತ್ರ ಪ್ರವೇಶ ಶುಲ್ಕವನ್ನು ನಿಗದಿಮಾಡಲಾಗಿದೆ.

    ನೋಂದಣಿ ಮಾಡಲು ಕ್ಲಿಕ್ ಮಾಡಿ : https://rzp.io/rzp/RegisterPathwayToPossibilities

    Share Information
    Advertisement
    Click to comment

    Leave a Reply

    Your email address will not be published. Required fields are marked *