LATEST NEWS
ಮಂಗಳೂರು- ರೈಲಿನಲ್ಲಿ ಬರುತ್ತಿರುವ ವೇಳೆ ಹೃದಯಾಘಾತ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಅಝೀಝ್ ನಿಧನ

ಉಳ್ಳಾಲ ಮಾರ್ಚ್ 07: ರೈಲಿನಲ್ಲಿ ಮಂಗಳೂರಿಗೆ ಆಗಮಿಸುತ್ತಿರುವ ವೇಳೆ ಹೃದಯಾಘಾತದಿಂದಾಗಿ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯ, ಕುತ್ತಾರು ಮದನಿನಗರ ನಿವಾಸಿ ಅಬ್ದುಲ್ ಅಝೀಝ್ ನಿಧನರಾದ ಘಟನೆ ಮಾರ್ಚ್ 5 ರಂದು ನಡೆದಿದೆ.

ಉದ್ಯಮಿಯಾಗಿದ್ದ ಅವರು ವ್ಯವಹಾರ ನಿಮಿತ್ತ ದಿಲ್ಲಿಗೆ ತೆರಳಿದ್ದರು. ಅಂಕೋಲಾ ಸಮೀಪ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಮುಂದಿನ ನಿಲ್ದಾಣ ಕುಮಟಾದಲ್ಲಿ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ. ಮಾಡಲಾಯಿತಾದರೂ, ಅದಾಗಲೇ ಅಬ್ದುಲ್ ಅಝೀಝ್ ಮೃತಪಟ್ಟಿದ್ದರು. ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷರಾಗಿದ್ದ ಅವರು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದರು.
