ಡೆಹ್ರಾಡೂನ್ ಮೇ 08 : ಹೆಲಿಕಾಪ್ಟರ್ ಪತನಗೊಂಡ ಪರಿಣಾಮ 6 ಮಂದಿ ಸಾವನಪ್ಪಿರುವ ಘಟನೆ ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಗಂಗಾನಣಿ ಬಳಿ ಗುರುವಾರ ಸಂಭವಿಸಿದೆ.

ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಆರು ಜನರಲ್ಲಿ ಐವರು ಮಹಿಳಾ ಪ್ರವಾಸಿಗರು. ಮಹಿಳೆಯರನ್ನು: ಕಲಾ ಸೋನಿ (61), ವಿಜಯ ರೆಡ್ಡಿ (57), ಮುಂಬೈನ ರುಚಿ ಅಗರ್ವಾಲ್ (56), ಉತ್ತರ ಪ್ರದೇಶದ ರಾಧಾ ಅಗರ್ವಾಲ್ (79) ಮತ್ತು ಆಂಧ್ರಪ್ರದೇಶದ ವೇದಾವತಿ ಕುಮಾರಿ (48) ಎಂದು ಗುರುತಿಸಲಾಗಿದೆ. ಗುಜರಾತ್‌ನ 60 ವರ್ಷದ ಪೈಲಟ್ ರಾಬಿನ್ ಸಿಂಗ್ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಆಂಧ್ರಪ್ರದೇಶದ 51 ವರ್ಷದ ಭಾಸ್ಕರ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಹಂಚಿಕೊಂಡಿದ್ದು, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. “ಅಪಘಾತದಲ್ಲಿ ಮಡಿದವರ ಆತ್ಮಗಳಿಗೆ ದೇವರು ಶಾಂತಿ ನೀಡಲಿ ಮತ್ತು ಈ ಅಪಾರ ನಷ್ಟವನ್ನು ಭರಿಸುವ ಶಕ್ತಿಯನ್ನು ಮೃತರ ಕುಟುಂಬಗಳಿಗೆ ನೀಡಲಿ” ಎಂದು ಬರೆದಿದ್ದಾರೆ.