DAKSHINA KANNADA
ಗೋಕರ್ಣ ಮಠಾಧೀಶರಿಂದ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ

ಮಂಗಳೂರು : ನಗರದ ರಥಬೀದಿಯಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ಶಾಖಾ ಮಠದಲ್ಲಿ ಕಳೆದ 51 ವರ್ಷಗಳಿಂದ ರಥಬೀದಿ ವೀರ ಬಾಲಕರ ಶ್ರೀ ಶಾರದಾ ಮಹೋತ್ಸವ ಸಮಿತಿಯಿಂದ ಪೂಜಿಸಲ್ಪಟ್ಟು ಬಂದಿರುವ ಶ್ರೀ ಶಾರದಾ ಮಾತೆಯ ವಿಗ್ರಹದ ಪ್ರತಿಷ್ಠೆ ಕಾರ್ಯಕ್ರಮವು ಶ್ರೀ ಗೋಕರ್ಣ ಪರ್ತಗಾಳಿ ಮಠದ ಮಠಾಧಿಪತಿಗಳಾದ ಪರಮ ಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಯವರ ಅಮೃತ ಹಸ್ತಗಳಿಂದ ನೆರವೇರಿತು.
ಶ್ರೀಗಳವರು ತಮ್ಮ ಕಾರ್ಕಳ ಮೊಕ್ಕಾಂ ನಿಂದ ಆಗಮಿಸಿದ್ದು ಶ್ರೀಗಳವರಿಗೆ ಶಾಖಾ ಮಠದ ಪದಾಧಿಕಾರಿಗಳು ಮತ್ತು ಶಾರದಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸಮಾಜ ಭಾಂದವರು ಭವ್ಯ ಪೂರ್ಣ ಕುಂಭ ಸ್ವಾಗತ ನೀಡಿದರು .

ರಥಬೀದಿಯ ಸ್ವದೇಶೀ ಸ್ಟೋರ್ಸ್ ಬಳಿಯಿಂದ ಅಡ್ಡಪಲ್ಲಕಿಯಲ್ಲಿ ಸ್ವಾಮೀಜಿಯವರು ವಿರಾಜಮಾನರಾಗಿ ಭವ್ಯ ಮೆರವಣಿಗೆ ನೆರವೇರಿತು.
ಬಳಿಕ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆ ನೆರವೇರಿತು , ಸಮಿತಿಯವತಿಯಿಂದ ನೂತನ ವಾಗಿ ನಿರ್ಮಿಸಲಾದ ನೀಲಿಕಲ್ಲಿನಿಂದ ಖಚಿತ ಸ್ವರ್ಣ ಹಾರವನ್ನು ಸಮರ್ಪಿಸಲಾಯಿತು .
ಬಳಿಕ ಶ್ರೀಗಳವರ ಪಾದಪೂಜೆ ಹಾಗೂ ಆಶೀರ್ವಚನ ನಡೆಯಿತು , ನೆರೆದ ಭಜಕರಿಗೆ ಶ್ರೀಗಳವರು ಫಲಮಂತ್ರಕ್ಷತೆ ನೀಡಿ ಆಶೀರ್ವದಿಸಿದರು . ಈ ಸಂದರ್ಭದಲ್ಲಿ ಶಾರದೋತ್ಸವ ಸಮಿತಿಯ ರಾಮ್ ಮೋಹನ್ ಪ್ರಭು , ವಿಗ್ನೇಶ್ ಪ್ರಭು , ನಾಗರಾಜ ಭಂಡಾರಿ , ಪ್ರಸಾದ್ ಶೆಣೈ , ಪ್ರದೀಪ್ ಶೆಣೈ , ಸುಭಾಸ್ ಭಟ್ , ರಾಮಕೃಷ್ಣ ಭಟ್ ಉಪಸ್ಥಿತರಿದ್ದರು .