Connect with us

DAKSHINA KANNADA

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಲಲಿತಪಂಚಮಿ, 40 ಸಾವಿರ ಭಕ್ತರಿಗೆ ಊಟ,20 ಸಾವಿರ ಶೇಷ ವಸ್ತ್ರ ವಿತರಣೆ..!

ಮಂಗಳೂರು :  ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲಲಿತಪಂಚಮಿ ಪ್ರಯುತ್ತ ರಾತ್ರಿ ಅನ್ನಪ್ರಸಾದ ಸ್ವೀಕರಿಸಿದ ಮಹಿಳಾ ಭಕ್ತರಿಗೆ ದೇವರ ಶೇಷ ವಸ್ತ್ರ ವಿತರಿಸಲಾಯಿತು.

ಸುಮಾರು 40 ಸಾವಿರ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು ಸುಮಾರು 20 ಸಾವಿರ ಶೇಷ ವಸ್ತ್ರವನ್ನು ವಿತರಿಸಲಾಯಿತು. ತಡ ರಾತ್ರಿವರೆಗೆ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಸುಮಾರು 300 ಸ್ವಂ ಸೇವಕರು 100 ಜನ ಪೋಲಿಸರು ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.ಈ ಸಂದರ್ಭ ಮುಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಲಕ್ಷೀ ನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಭೋಜನಾ ಶಾಲೆಯ ಮೇಲ್ವಿಚಾರಕ ತಾರನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಶೇಷ ವಸ್ತ್ರ ಕಳೆದ ಹಲವು ವರ್ಷಗಳಿಂದ ಲಲಿತ ಪಂಚಮಿಯಂದು ವಿತರಿಸಕಾಗುತ್ತಿದ್ದು, ಕೆಲವು ವರ್ಷದ ಹಿಂದೆ ಸೀರೆ ಕಣವಾಗಿ ಮಾಡಿ ವಿತರಿಸುತ್ತಿದ್ದರು, ಆದರೆ ಇತ್ತಿಚಿನ ಕೆಲ ವರ್ಷಗಳಲ್ಲಿ ಇಡೀ ಸೀರೆಯನ್ನು ಭಕ್ತರಿಗೆ ವಿತರಿಸಲಾಗುತ್ತದೆ, ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ದೇವರಿಗೆ ಸೀರೆ ಸಮರ್ಪಿಸುತ್ತಿದ್ದು, ವರ್ಷಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೀರೆ ದೇವರಿಗೆ ಸಮರ್ಪಣೆಯಾಗುತ್ತದೆ, ಈ ಸೀರೆಯನ್ನು ಕಳೆದ ಕೆಲವು ವರ್ಷಗಳಿಂದ ಸೀರೆಯ ದರದ ಶೇಖಡ 30 ರಷ್ಟು ಕಡಿತಗೊಳಿಸಿ ದೇವಳದಿಂದ ಮಾರಾಟ ಮಾಡಲಾಗುತದೆ ಉಳಿದ ಸೀರೆಯನ್ನು ಲಲಿತಚಮಿಯಂದು ವಿತರಿಸಲಾಗುತ್ತದೆ.ಕಳೆದ ವರ್ಷ ಎಪ್ರಿಲ್ ನಿಂದ ಈ ವರ್ಷದ ಮಾರ್ಚ್ ವರೆಗೆ ಭಕ್ತರಿಂದ 53612 ಸೀರೆಗಳು ಸಮರ್ಪಣೆಯಾಗಿದ್ದು ಕಳೆದ ಎಪ್ರಿಲ್ ನಿಂದ ಇದುವರೆಗೆ 20ಸಾವಿರದಷ್ಟು ಸೀರೆಗಳು ಸಮರ್ಪಣೆಯಾಗಿವೆ. ನವರಾತ್ರಿಯ ಐದು ದಿನಗಳಲ್ಲೇ ಸಾವಿರಕ್ಕೂ ಹೆಚ್ಚು ಸೀರೆ ದೇವರಿಗೆ ಸಮರ್ಪಣೆಯಾಗಿವೆ.ಭಕ್ತರು ನೀಡಿದ ಸೀರೆಗಳನ್ನು ಅದರ ದರದ ಇಪ್ಪತ್ತೈದು ಶೇಕಡಾ ಕಡಿಮೆ ದರದಲ್ಲಿ ವಾಪಾಸು ಭಕ್ತರಿಗೇ ನೀಡಲಾಗುತ್ತಿದ್ದು ಇದರಿಂದ ಕಳೆದ ವರ್ಷ ರೂ. 1 ಕೋಟಿ 17ಲಕ್ಷ ರೂ ಆದಾಯ ದೇಗುಲಕ್ಕೆ ಬಂದಿದೆ. ಈ ವರ್ಷ ಸುಮಾರು ರೂ. 55 ಲಕ್ಷ ಆದಾಯ ಬಂದಿದೆ. ಕಟೀಲು ದೇಗುಲಕ್ಕೆ ಬರುವ ಸೀರೆಗಳನ್ನು ರೂ. 2000 ಮೊತ್ತಕ್ಕಿಂತ ಹೆಚ್ಚು ಸೇವೆ ಮಾಡುವ ಭಕ್ತರಿಗೆ ಪ್ರಸಾದ ರೂಪವಾಗಿ ಶೇಷವಸ್ಯ್ರ ರೂಪದಲ್ಲಿ ನೀಡಲಾಗುತ್ತದೆ. ರಂಗಪೂಜೆ ಅನ್ನದಾನ ವಿದ್ಯಾದಾನ ಗೋದಾನ ಇತ್ಯಾದಿ ಸೇವಾದಾರರಿಗೆ ಪ್ರಸಾದ ರೂಪವಾಗಿ ನೀಡಲಾಗುತ್ತದೆ. ಯಕ್ಷಗಾನ ಕಲಾವಿದರಿಗೆ ಮೇಳಗಳಿಗೆ , ದೇಗುಲಕ್ಕೆ ಬರುವ ಗಣ್ಯರಿಗೆ ಪ್ರಸಾದ ರೂಪವಾಗಿ ನೀಡಲಾಗುತ್ತದೆ.

Share Information
Advertisement
Click to comment

You must be logged in to post a comment Login

Leave a Reply