DAKSHINA KANNADA
ಮಂಗಳೂರು ಗ್ಯಾಂಗ್ ರೇಪ್ : ಮುಂದುವರೆದ ಪೊಲೀಸ್ ತನಿಖೆ

ಮಂಗಳೂರು ಗ್ಯಾಂಗ್ ರೇಪ್ : ಮುಂದುವರೆದ ಪೊಲೀಸ್ ತನಿಖೆ
ಮಂಗಳೂರು, ನವೆಂಬರ್ 27 : ಸುಕ್ಷಿತರ ನಗರ ಎಂದೇ ಖ್ಯಾತಿ ಪಡೆದ ಮಂಗಳೂರೇ ತಲೆ ತಗ್ಗಿಸುವಂತಹ ಗ್ಯಾಂಗ್ ರೇಪ್ ಮಂಗಳೂರಿನ ಇತಿಹಾಸದಲ್ಲಿ ಇದೇ ಮೊದಲ ಬಾರಿ ನಡೆದಿದೆ. ವಾರದ ಹಿಂದೆ ಮಂಗಳೂರಿನ ತೋಟಬೆಂಗ್ರೆಯಲ್ಲಿ ವಿಹಾರಕ್ಕೆಂದು ಬಂದ ಯುವ ಜೋಡಿಯ ಯುವತಿ ಮೇಲೆ 7 ಜನರು ಮೃಗೀಯವಾಗಿ ಸಾಮೂಹಿಕ ಅತ್ಯಚಾರ ಎಸಗಿದ್ದು, ಮುಚ್ಚಿ ಹೋಗಲಿದ್ದ ಈ ಪ್ರಕರಣವನ್ನು ಭೇಧಿಸಲು ಮಂಗಳೂರು ಪೋಲಿಸರು ವಹಿಸಿದ ಶ್ರಮ ಮಾತ್ರ ಅಪಾರ.
ಮೂಲಗಳ ಪ್ರಕಾರ ಮಾಹಿತಿ ಪಡೆದು ತನಿಖೆ ಪ್ರಾರಂಭಿಸಿದ್ದ ಪಣಂಬೂರು ಪೊಲೀಸರು ಈ ಬಗ್ಗೆ ಸಾಕಷ್ಟು ಜನರ ವಿಚಾರಣೆ ನಡೆಸಿದೆ.

ಸಾಮೂಹಿಕ ಅತ್ಯಚಾರಕ್ಕೆ ಒಳಗಾದ ಸಂತ್ರಸ್ತೆ ಯಾರು ಎಂಬುವುದು ಭಾರಿ ತ್ರಾಸದಾಯಕ ಕಾರ್ಯವಾಗಿತ್ತು.
ಈ ಬಗ್ಗೆ ಮಾಹಿತಿ ಕೂಡ ಕಲೆ ಹಾಕಿದ್ದ ಪೊಲೀಸರು ಕೊನೇಗೂ ಅವರನ್ನು ಪತ್ತೆ ಹಚ್ಚಿ ಅವರನ್ನು ವಿಶ್ವಾಸಕ್ಕೆ ಪಡೆದು ದೂರು ದಾಖಲು ಮಾಡಿಸುವಲ್ಲಿ ಯಶಸ್ವಿಯಾದರು.
ಪೊಲೀಸರು ಮುತುವರ್ಜಿ ವಹಿಸಿ ತನಿಖೆ ನಡೆಸದಿದ್ದರೆ ಇಡೀ ಪ್ರಕರಣ ಮುಚ್ಚಿಹೋಗುವ ಸಾಧ್ಯತೆ ಇತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಈಗಾಗಲೇ 6 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದಿರುವ ಆರೋಪಿಗಳಿಗೆ ಮೆಡಿಕಲ್ ಟೆಸ್ಟ್ ಕೂಡ ಮಾಡಿಸಿದ್ದಾರೆ.ಪ್ರಕರಣದ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು ಆತನಿಗಾಗಿ ಬಲೆ ಬೀಸಲಾಗಿದೆ.
ಪಣಂಬೂರು ಠಾಣೆಯಲ್ಲಿದ್ದ ಪ್ರಕರಣವನ್ನು ಬಳಿಕ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಪ್ರಸ್ತುತ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಇಂದು ಸಂಜೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಲಿದ್ದಾರೆ.