LATEST NEWS
ಮಂಗಳೂರು: ಜನಪದ ಪಾಡ್ದನ ಕಲಾವಿದ ಬೊಳ್ಳಾಜೆ ಬಾಬಣ್ಣ ವಿಧಿವಶ

ಮಂಗಳೂರು, ಜುಲೈ 11: ಜನಪದ ಪಾಡ್ದನ ಕಲಾವಿದ ಬೊಳ್ಳಾಜೆ ಬಾಬಣ್ಣ (71) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ದೈವಾಧೀನರಾದರು.
ತುಳುನಾಡಿನ ಹಲವಾರು ದೈವಗಳ ಪಾಡ್ದಾನ ಬಲ್ಲವರಾಗಿದ್ದು ಆಕಾಶವಾಣಿ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಪಾಡ್ದನವನ್ನು ಹಾಡುತ್ತಿದ್ದರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಖಾಸಗಿ ವಾಹಿನಿಯಲ್ಲಿ ಇವರ ಪಾಡ್ದನ ದಾಖಲೀಕರಣದೊಂದಿಗೆ ಪ್ರದರ್ಶನ ಗೊಂಡಿತ್ತು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸನ್ಮಾನಿತರಾಗಿದ್ದರು ಹಲವಾರು ಸನ್ಮಾನ ಪುರಸ್ಕಾರಗಳನ್ನು ಪಡೆದಿದ್ದರು ಇತ್ತೀಚೆಗೆ ಕಾಂತಾರ ಚಲನಚಿತ್ರ ತಂಡಕ್ಕೆ ಪಾಡ್ದಾನವನ್ನು ಹಾಡಿದ್ದರು ಆದಿ ದ್ರಾವಿಡ ಸಮುದಾಯದ ಹಿರಿಯ ನೇತಾರರಾಗಿದ್ದು ಸಮುದಾಯದ ಕುಲ ಸತ್ಯಗಳಾದ ಸತ್ಯ ಸಾರಮಣಿ ದೈವಗಳ ಪಾಡ್ದಾನದ ಆಕರವಾಗಿದ್ದರು ಸಮುದಾಯಕ್ಕೆ ಮಾರ್ಗದರ್ಶಕರಾಗಿದ್ದರು 1 ಗಂಡು 3 ಹೆಣ್ಣು ಮಕ್ಕಳು ಶಿಷ್ಯಂದಿರು ಮತ್ತು ಅಪಾರ ಬಂದುವರ್ಗವನ್ನು ಅಗಲಿದ್ದಾರೆ.
ಎಡಪದವು ಬೋರುಗುಡ್ಡೆಯ ಸ್ವಗ್ರಹದಲ್ಲಿ ಅಂತ್ಯಕ್ರಿಯೆ ಆದಿ ದ್ರಾವಿಡ ಸಮಾಜದ ಪದ್ಧತಿಯಂತೆ ನೆರವೇರಿತು
ಸಮಾಜದ ಗಣ್ಯರು ಅಂತ್ಯಕ್ರಿಯೆಯಲ್ಲಿ ಉಪಸ್ಥಿತರಿದ್ದು ಶ್ರದ್ಧಾಂಜಲಿ ಸಲ್ಲಿಸಿದರು