Connect with us

    LATEST NEWS

    ಮಂಗಳೂರು ; ಉಳಾಯಿಬೆಟ್ಟು ಕಿರುಸೇತುವೆ ಬದಿಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ನ.13ರಂದು ‘ಸಾರ್ವಜನಿಕ ಪ್ರತಿಭಟನೆ’ ಗೆ ನಿರ್ಧಾರ..!

    ಮಂಗಳೂರು : ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಕಿರುಸೇತುವೆ ಬದಿಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ನ.13ರಂದು ಸಾರ್ವಜನಿಕರು ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ.

    ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸಾಲೆ ಮೇಲ್ಮನೆಯಲ್ಲಿರುವ, ಸದ್ಯ ಶಿಥಿಲಗೊಂಡಿದೆ ಎಂದು, ಘನ ವಾಹನ ಸಂಚಾರ ನಿಷೇಧಿಸಲ್ಪಟ್ಟಿರುವ ಉಳಾಯಿಬೆಟ್ಟುವಿನ ಕಿರು ಸೇತುವೆಗೆ ಪರ್ಯಾಯವಾಗಿ ಅಲ್ಲೇ ಪಕ್ಕದಲ್ಲಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲು ಸಾರ್ವಜನಿಕರು ನಿಶ್ಚಯಿಸಿರುತ್ತಾರೆ. ಆದರೆ ಉಳಾಯಿಬೆಟ್ಟು -ಪೆರ್ಮಂಕಿ-ಮಲ್ಲೂರು ತೀರಾ -ಬಿ.ಸಿ.ರೋಡ್ -ಅರ್ಕುಳ- ಅಡ್ಯಾರ್‌ಗೆ ರಾಷ್ಟ್ರೀಯ ಹೆದ್ದಾರಿ 169 ರಿಂದ ನೇರ ಸಂಪರ್ಕ ಹೊಂದಿರುವ ಈ ಕಿರು ಸೇತುವೆ, ನಿಷೇಧಗೊಂಡಿರುವ ಹಿನ್ನಲೆಯಲ್ಲಿ, ಈ ಭಾಗದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಮಹಿಳೆಯರು ಮತ್ತು ವಯೋವೃದ್ಧರ ಈ ಮಾರ್ಗದಲ್ಲಿ ಸಾರ್ವಜನಿಕ ಕಷ್ಟದಾಯಕವಾಗಿದೆ. ಕಿರು ಸೇತುವೆ ನಿಷೇಧದ ಬಳಿಕ ವಾಹನಗಳು (KSRTC ಬಸ್ಸುಗಳು ಮತ್ತು ಖಾಸಾಗಿ ಶಾಲಾ ಕಾಲೇಜು ಬಸ್ಸುಗಳು)ಸ್ಥಗಿತಗೊಂಡಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ಹೇಳಿದ್ದಾರೆ.

    ಈ ಬಾಗದಲ್ಲಿ ಕಿರು ಸೇತುವೆಗೆ ಪರ್ಯಾಯ ಮಣ್ಣಿನ ರಸ್ತೆ ನಿರ್ಮಿಸುವರೇ, ಜಿಲ್ಲಾಡಳಿತಕ್ಕೆ ಮೂರು ಬಾರಿ ಮನವಿ ಸಲ್ಲಿಸಲಾಗಿದ್ದು ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರೊಂದಿಗೆ ಖುದ್ದಾಗಿ ಸಮಸ್ಯೆಯ ಒಳಹೊರವುವನ್ನು ವಿವರಿಸಲಾಗಿತ್ತು.ಆದರೆ ಈವರೆಗೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಯಾವುದೇ ಉತ್ತರ ಬಂದಿರುವುದಿಲ್ಲ. ಹಾಗಾಗಿ ಸ್ಥಳೀಯ ನಾಗರೀಕರು, ಶಾಲಾ ವಿದ್ಯಾರ್ಥಿಗಳು, ಮಹಿಳೆಯರು, ಕೂಲಿ ಕಾರ್ಮಿಕರು ಹಾಗೂ ಇತರ ಎಲ್ಲರೂ ಸೇರಿಕೊಂಡು ನವೆಂಬರ್ 13ರಂದು ರಾಷ್ಟ್ರೀಯ ಹೆದ್ದಾರಿ 169ರ ಪರಾರಿಯಲ್ಲಿ “ಸಾರ್ವಜನಿಕ ಪ್ರತಿಭಟನೆ” ನಡೆಸಲು ಉದ್ದೇಶಿಸಿದ್ದೇವೆ. ಈ ಸಾರ್ವಜನಿಕರು, ಎಲ್ಲಾ ಸಂಘ ಸಂಸ್ಥೆಗಳು ಪೂರ್ಣವಾಗಿ ಈಗಾಗಲೇ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಪತ್ರಿಕಾಗೋಷ್ಠಿಯಲ್ಲಿ ಇಸ್ಮಾಯಿಲ್,ಮಹಮ್ಮದ್ ಶರೀಫ್,ವಿಶ್ವನಾಥ್ ಶೆಟ್ಟಿ, ದೀನೇಶ್ ಪಲಿಮಾರ್,ದಿನೇಶ್ ಕುಮಾರ್,ಸಂತೋಷ್ ಪೆರ್ಮಂಕಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply