Connect with us

DAKSHINA KANNADA

ಮಂಗಳೂರು : ಹಿಂದೂ ಪರ ಹೋರಾಟಗಾರ ಸತ್ಯಜಿತ್ ಸುರತ್ಕಲ್ ಅವರಿಗೆ ಮಾತೃ ವಿಯೋಗ, ಭಾರತಿಯಮ್ಮನಿಗೆ ಬಾವುಕ ಬರಹದಲ್ಲಿ ಕಂಬನಿ‌ ಮಿಡಿದ ಜಗದೀಶ್ ಕಾರಂತ್..!

ಸುರತ್ಕಲ್ : ಹಿಂದೂ ಪರ ಹೋರಟಗಾರರಾದ ಸತ್ಯಜಿತ್ ಸುರತ್ಕಲ್ ರವರ ತಾಯಿ ಶ್ರೀಮತಿ ಭಾರತಿ ವಾಸುದೇವ ಮಂಗಳವಾರ ನಿಧನರಾದರು. ಮೃತರು ಪತಿ ವಾಸುದೇವ, ಪುತ್ರ ಸತ್ಯಜಿತ್ ಸುರತ್ಕಲ್ ಹಾಗೂ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

 

ಹಿಂಜಾವೇ ಕರ್ನಾಟಕ ದಕ್ಷಿಣ ಪ್ರಾಂತ್ಯ ಕಾರ್ಯಕಾರಣಿ ಸದಸ್ಯ ದೊಡ್ಡತುಮಕೂರು ಆನಂದ್ ಹಾಗೂ ಹಿಂದೂ ಪರ ಸಂಘಟನೆ ಪ್ರಮುಖರು ಶ್ರೀಮತಿ ಭಾರತಿ ವಾಸುದೇವ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಭಾರತಿಯಮ್ಮನಿಗೆ ಬಾವುಕ ಬರಹದಲ್ಲಿ ಕಂಬನಿ‌ ಮಿಡಿದ ಜಗದೀಶ್ ಕಾರಂತ್:
ಅಪ್ರತಿಮ ಸಂಘಟಕ ಹಿಂದು ಜಾಗರಣ ವೇದಿಕೆಯನ್ನು ಜಿಲ್ಲೆಯಲ್ಲಿ ರಾಜ್ಯದಲ್ಲಿ ಘಟ್ಟಿಗೊಳಿಸಿ ಯುವಕ ಜೊತೆಯಿದ್ದ ಸತ್ಯಜಿತ್‌ ಸುರತ್ಕಲ್ ಅವರ ಮಾತೃ ಭಾರತಿ ಇಂದು ನಿಧನರಾಗಿದ್ದರು.

 

ಅಂತಿಮ ನಮನಕ್ಕೆ ಗಣ್ಯರು ಭಾಗವಹಿಸಿದ್ದು ಸಾವಿರಾರು ಜನರು ಕಣ್ಣೀರ ಕಂಬನಿ ಹರಿಸಿದರು. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಕಾರ್ಯಕ್ರಮಕ್ಕೆ ಆಗಮಿಸುವ ಜಗದೀಶ್ ಕಾರಂತ್ ಅವರು ಹೆಚ್ಚಾಗಿ ಸತ್ಯಜಿತ್ ಮನೆಯಲ್ಲಿ ಉಳಿಯುತ್ತಿದ್ದರು. ಆ ಸಂಧರ್ಭದಲ್ಲಿ ತಾಯಿ ಭಾರತೀ ಯವರ ಉಪಚಾರ, ಮಗನಂತೆ ಸಲಹಿದ ನೆನಪುಗಳನ್ನು ಇಂದು ಅಕ್ಷರ ರೂಪದಲ್ಲಿ ಕಾರಂತರು ಬರೆದಿದ್ದಾರೆ. ಮಮತೆಯ ಅಮ್ಮನಿಗೆ ಮಗನ ಮೌನ ನಮನ ಎಂಬ ಶೀರ್ಷಿಕೆಯಡಿಯಲ್ಲಿ ಬರೆದಿದ್ದು ಪ್ರತಿಯೊಂದು ಪದಗಳಿಗೆ ತೂಕದ ಮಾತುಗಳಿಂದ ತಾಯಿ ಮಗನ ಒಡನಾಟ ಸಮಯವನ್ನು ಇದು ತೆರೆದಿಡುತ್ತಿದ್ದು ಸಾಮಾಜಿಕಜಾಲತಾದಲ್ಲಿ ಹಂಚಿಕೊಂಡಿದ್ದಾರೆ.

” ಮಮತೆಯ ಅಮ್ಮನಿಗೆ ಮಗನ ಮೌನ ನಮನ ಮಹಾತಾಯಿ ಭಾರತಿ, ಅಮ್ಮ ನಿಮಗೆ ಪ್ರಣಾಮಗಳು.

ಅಮ್ಮ ನಿಮ್ಮ ಆತ್ಮಕ್ಕೆ ಶಾಲತ ನಮನಗಳು ಹೆಸರಿಗೆ ತಕ್ಕಿಂತೆ ತಾಯಿ ಆಗಿದ್ದವರು ನೀವು, ಕೇವಲ ಸತ್ಯ, ಸಂದೀಪ ಮತ್ತು ಮಗಳು ಸುಜಯರಿಗೆ ಮಾತ್ರ ಅಮ್ಮನಾಗಿರಲಿಲ್ಲ, ಮಾರಾರು ಅಲ್ಲ, ಸಾವಿರಾರು ಸಾಮಾಜಿಕ ಕಾರ್ಯಕರ್ತರ ಸಾಕ್ಷಾತ ಅಮ್ಮನಾಗಿದ್ದವರು ನೀವು ನಿಮ್ಮ ಮಮತೆಯ ಪ್ರೀತಿಯನ್ನು ಆಸ್ವಾದಿಸಿದ ಮಕ್ಕಳುಗಳು ನಾವು, ಬಾಗಿಲು ತೆರೆದಾಗ, ಮಾದಲು ಆಂದಾಗ ನಿಮ್ಮ ಹೃದಯದಾಳದ ಮುಗ್ಧ ನಗು ನನ್ನಂತಹ ಸಾವಿರಾರು ಕಾರ್ಯಕರ್ತರ ಮನಸ್ಸನ್ನ ಉಲ್ಲಸಿತಗೊಳಿಸಿದ್ದು ಇನ್ನು ನೆನಪು ಮಾತ್ರ ‘ಸತ್ಯ’ನೊಂದಿಗೆ ಇರುವೆಯಂತೆ ಮುತ್ತಿರುತ್ತಿದ್ದ ಯುವಕರಿಗೆ ಸ್ವಾರ್ತಿಯ ಮಾತನ್ನು ಆಡುತ್ತಾ ಪ್ರೇರಣೆಯ ಪ್ರೋತವಾಗಿದ್ದವರು ನೀವು, ಮುತ್ತಿನಂತಹ ಮಕ್ಕಳನ್ನ ಹೆತ್ತು, ಅತ್ಯುತ್ತಮ ಸಂಸ್ಕಾರವನ್ನು ನೀಡಿ, ಸಮಾಜಮುಖಿ ಕಾರ್ಯಕ್ಕೆ ನಿರಂತರ ಬೆನ್ನೆಲುಬಾಗಿ ನಿಂತವರು ನೀವು ಆತ್ಮೀಯ ವಾಸುದೇವಣ್ಣ, ನೀವಿಬ್ಬರು ಚಿಂತನೆಯ ಚಿಲುಮೆಯಾ ಹೌದು, ನಿರಂತರ ನಗುವಿನ ಬುಗ್ಗೆಯಾ ಹೌದು. ನನ್ನ ಸಾಮಾಜಿಕ ಜೀವನದಲ್ಲಿ ನಾನು ಕಂಡ ಮಹಾಮಾತೆ ನೀವು. ಅಮ್ಮ ನನ್ನ ಬಗ್ಗೆ ಮಾತ್ರ ಆತ್ಮೀಯ ಒಲವು ತೋರುತ್ತಾರೆ ಎಂದೆನಿಸುತ್ತಿದ್ದಾ.. ಅದೇ ಭಾವನೆ, ಗೌರವವನ್ನು ಪ್ರತಿಯಾಬ್ಬ ಕಾರ್ಯಕರ್ತರು ತೋರುತ್ತಿದ್ದರು. ಅದು ನಿಮ್ಮ ದೊಡ್ಡ ಗುಣ, ಸಮಿತಿಯ ಕಾರ್ಯಕರ್ತೆಯಾಗಿ, ಹಿಂದುತ್ವ ಮತ್ತು ರಾಷ್ಟ್ರೀಯತೆಯ ವಿಚಾರದಲ್ಲಿ ನಿಮ್ಮ ಬದ್ಧತೆ ಸಮಾಜಕ್ಕೆ ಮೇಲ್ಪಂಕ್ತಿ, ನಾಮ ನೋಡುವುದಕ್ಕಿಂತ ಮೊದಲು ಎಷ್ಟು ದುಡಿದಿದ್ದಿರೋ ಗೊತ್ತಿಲ್ಲ! ಮಂಗಾರಿನಲ್ಲಿ ಸಂಘ ಪರಿವಾರದಲ್ಲಿ ದುಡಿದವರೆಲ್ಲಾ ನಿಮ್ಮಿಬ್ಬರ ಕುರಿತು ಸದಾ ನೆನಪಿಸಿಕೊಳ್ಳುತ್ತಿರುವುದು ಆಗಲೇ ನಾನು ಕೇಳಿ ತಿಆದಿದ್ದೆ. ಫ್ಯಾನ ಒಡನಾಟದಿಂದಾಗಿ ನಿಮ್ಮ ಮಮಕಾರದ ಸವಿಯನ್ನು ಸಾಕಷ್ಟು ಸಮಯ ಅನುಭವಿಸಿದೆ ನನ್ನ ಜೀವನದಲ್ಲಿ ನಾನು ಕಂಡ ಸಾಕ್ಷಾತೆ ಜೀಜಾಬಾಯಿ ನೀವೆ ಆಗಿದ್ದೀರಿ. ನಿಮ್ಮಮ್ಮ ಅರಿತವರು ಇಂದು ಇಲ್ಲ, ಇಂದು ಇರುವವರಿಗೆ ನಿಮ್ಮ ಅರಿವಿಲ್ಲ. ಪ್ರೀತಿಯ ಮಗನಾಗಿ ನಾಮ ನಿಮಗೆ ಋಣಿ. ನಿಮ್ಮ ಆತ್ಮಕ್ಕೆ ನಮ್ಮ ಶ್ರದ್ಧಾಂಜಲಿ. ಇನ್ನು ನೀವು ನೆನಪು ಮಾತ್ರ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ, ನಮ್ಮಿಂದಲೂ ಆಗಿರುವ ತಪ್ಪುಗಳಿಗೆ ಕ್ಷಮೆ ಇರಲಿ.”

ನಿಮ್ಮ ಪ್ರೀತಿಯ ಮಗ ಜಗದೀಶ ಕಾರಂತ..

ಹಿಂದು ಜಾಗರಣ ವೇದಿಕೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *