LATEST NEWS
ಆಗೋವರೆಗೆ ಇದ್ದವರು ಆರೋ ತನಕ ಇರಬಾರದೇ ? ವಿಕೇಂಡ್ ಲಾಕ್ ಡೌನ್ ಬಗ್ಗೆ ಜಿಲ್ಲಾಧಿಕಾರಿ ಆಡಿಯೋ ವೈರಲ್

ಮಂಗಳೂರು ಸೆಪ್ಟೆಂಬರ್ 05: ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ವಿಕೇಂಡ್ ಕರ್ಪ್ಯೂ ಕುರಿತಂತೆ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರಿಗೆ ಕರೆ ಮಾಡಿದ ವ್ಯಕ್ತಿಗೆ ಸಮಾಧಾನ ಚಿತ್ತದಿಂದ ಉತ್ತರಿಸಿದ ಆಡಿಯೋ ಈಗ ವೈರಲ್ ಆಗಿದೆ.
ರೆಡಿಮೇಡ್ ಬಟ್ಟೆ, ಫ್ಯಾನ್ಸಿ, ಚಪ್ಪಲಿ ಮಾರಾಟದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಂತೋಷ್ ಕಾಮತ್ ಅನ್ನುವವರು ವೀಕೆಂಡ್ ಕರ್ಫ್ಯೂವಿನಂದ ಉಂಟಾಗುತ್ತಿರುವ ಸಮಸ್ಯೆ ಕುರಿತಂತೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲು ಕರೆ ಮಾಡಿ ಮಾತನಾಡಿದ್ದಾರೆ. ವಿಕೇಂಡ್ ಲಾಕ್ ಡೌನ್ ಸಂದರ್ಭ ತಮ್ಮ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿ, ಯಾವುದೇ ರೀತಿಯಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ರಾಜೇಂದ್ರ ಜಿಲ್ಲೆಯ ವಾಸ್ತವ ಸ್ಥಿತಿಯನ್ನು ಮನದಟ್ಟು ಮಾಡಿದ್ದಾ1ರೆ. ಈ ಕೊರೊನಾ ನಿರ್ವಹಣೆಯಿಂದ ನಮಗೂ ಸಾಕಾಗಿ ಹೋಗಿದೆ. ವಿಕೇಂಡ್ ಲಾಕ್ ಡೌನ್ ನಿಂದ ನಿಮಗೆ ಕಷ್ಟ ಕೊಡಬೇಕು ಅಂತೇನಿಲ್ಲ. ಆದರೆ, ಈ ವಾರ ಕೊರೊನಾ ಪಾಸಿಟಿವ್ ರೇಟ್ 2.04 ಇದೆ. ಮುಂದಿನ ವಾರಕ್ಕೆ ಖಂಡಿತವಾಗ್ಯೂ ಈ ದರ 2.0 ಒಳಗೆ ಬರುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಕೂಡ ವೀಕೆಂಡ್ ಕರ್ಫ್ಯೂ ತೆಗೆಯಬೇಕೆಂದು ಹೇಳುತ್ತಿದ್ದಾರೆ. ಆದರೆ,ನಾವು ರಾಜ್ಯ ಸರಕಾರದ ಆದೇಶವನ್ನು ಪಾಲನೆಮಾಡಬೇಕಾಗುತ್ತದೆ.
ನೀವು ಅಂಗಡಿ ತೆರೆದಲ್ಲಿ ನಾವು ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಟ್ರೇಡ್ ಲೈ ಸನ್ಸ್ ರದ್ದು ಮಾಡುವುದು , ಕೇಸ್ ಮಾಡುವುದು, ಆಮೇಲೆ ಕೋರ್ಟ್ ಅಲೆದಾಡುವುದು ಎಲ್ಲ ನಿಮಗೆ ಬಿಟ್ಟಿದ್ದು. ಇಷ್ಟು ದಿನದವರೆಗೂ ಕಾದಿರಿ. ಈ ಬಾರಿ ಒಂದು ದಿನಕ್ಕೆ ಕಾದು ಬಿಡಿ. ಡೆಫಿನಿಟ್ ಆಗಿ ಹೇಳ್ತೀನಿ. ಮುಂದಿನ ವಾರಕ್ಕೆ ವೀಕೆಂಡ್ ಲಾಕ್ಡೌನ್ ತೆರವಾಗುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.