LATEST NEWS
ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ಸೇರಿ ನಾಲ್ವರಿಗೆ ಸೋಂಕು ದೃಢ
ಮಂಗಳೂರು, ಜುಲೈ 3: ಮಂಗಳೂರಿನಲ್ಲಿ ಸಿಸಿಬಿ ಪೊಲೀಸರಿಗೂ ಕೊರೊನಾ ಸೋಂಕು ತಗಲಿದೆ. ಸಿಸಿಬಿ ಇನ್ ಸ್ಪೆಕ್ಟರ್ ಸೇರಿದಂತೆ ನಾಲ್ವರು ಹಿರಿಯ ಪೊಲೀಸರಿಗೆ ಸೋಂಕು ಪಾಸಿಟಿವ್ ಆಗಿದ್ದು ಕ್ರೈ ಬ್ರಾಂಚ್ ಪೊಲೀಸರಲ್ಲಿ ಆತಂಕ ಹುಟ್ಟಿಸಿದೆ.
ಕಳೆದ ಒಂದು ವಾರದಿಂದ ಜ್ವರ ಮತ್ತು ಕೆಮ್ಮಿನ ಲಕ್ಷಣ ಇತ್ತು. ನಾರ್ಮಲ್ ಶೀತ ಜ್ವರ ಎಂದುಕೊಂಡಿದ್ದೆವು. ನಿನ್ನೆ ಡಿಸಿಪಿಯವರು ಕೋವಿಡ್ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದ್ರು. ನಾಲ್ವರನ್ನು ಪರೀಕ್ಷೆ ನಡೆಸಿದಾಗ, ನಾಲ್ವರೂ ಪಾಸಿಟಿವ್ ಆಗಿದ್ದಾರೆ. ಇಂದು ಎಂಟು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಸಿಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಉಳ್ಳಾಲ ಠಾಣೆಯಲ್ಲಿ 12 ಮಂದಿಗೆ ಕೊರೊನಾ ದೃಢವಾಗಿದೆ. ಕಂಕನಾಡಿ ಗ್ರಾಮಾಂತರ ಠಾಣೆಯಲ್ಲೂ ಇಬ್ಬರಿಗೆ ಪಾಸಿಟಿವ್ ಆಗಿದೆ. ಎಸಿಪಿ ದರ್ಜೆಯ ಅಧಿಕಾರಿಗೂ ಸೋಂಕು ದೃಢಪಟ್ಟಿದೆ. ಇದೇ ವೇಳೆ, ಎಸಿಪಿಯ ಸಂಪರ್ಕದಲ್ಲಿದ್ದ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳನ್ನು ಕ್ವಾರಂಟೈನ್ ಆಗಲು ಸೂಚಿಸಲಾಗಿದೆ. ಕೊರೊನಾ ವಾರಿಯರ್ಸ್ ಆಗಿರುವ ಪೊಲೀಸರು, ವೈದ್ಯರು ಮತ್ತು ಅಧಿಕಾರಿ ವರ್ಗ ಕೊರೊನಾ ಸೋಂಕಿಗೆ ಒಳಗಾಗುತ್ತಿರುವುದು ಆತಂಕ ಹುಟ್ಟಿಸಿದೆ.