Connect with us

    LATEST NEWS

    ಕೇರಳ ಲಾಬಿಗೆ ಮಣಿದ ರೈಲ್ವೆ ಇಲಾಖೆ – ಮಂಗಳೂರು ಬೆಂಗಳೂರು ರೈಲು ಕೊಯಿಕ್ಕೋಡ್ ಗೆ ವಿಸ್ತರಣೆ

    ಮಂಗಳೂರು ಜನವರಿ 31 : ಮಂಗಳೂರಿಗೆ ಬರುವ ಎಲ್ಲಾ ರೈಲುಗಳು ತಮಗೆ ಬೇಕು ಎನ್ನುವ ಕೇರಳದ ಲಾಬಿಗೆ ಇದೀಗ ಮತ್ತೊಂದು ರೈಲು ಸೇರ್ಪಡೆಯಾಗಿದೆ. ಕರಾವಳಿಗರ ಭಾರೀ ವಿರೋಧವಿದ್ದರೂ ಇದೀಗ ಬೆಂಗಳೂರು– ಮಂಗಳೂರು– ಕಣ್ಣೂರು ಎಕ್ಸ್‌ಪ್ರೆಸ್‌ ರೈಲನ್ನು ಕೇರಳದ ಕೊಯಿಕ್ಕೋಡ್‌ವರೆಗೆ ವಿಸ್ತರಿಸುವ ದಕ್ಷಿಣ ರೈಲ್ವೆಯ ಪ್ರಸ್ತಾವಕ್ಕೆ ರೈಲ್ವೆ ಸಚಿವಾಲಯ ಸಮ್ಮತಿಸಿದೆ.


    ಬೆಂಗಳೂರು–ಮಂಗಳೂರು– ಕಾರವಾರ ರೈಲು ಮಂಜೂರಾದ ಕೆಲವೇ ದಿನಗಳಲ್ಲಿ ಆ ರೈಲನ್ನು ಡಿವೈಡ್ ಮಾಡಿ ಕಣ್ಣೂರಿಗೆ ವಿಸ್ತರಿಸಿದ್ದರು. ಇದೀಗ ಮತ್ತೆ ಕೇರಳ ಲಾಬಿ ಕೆಲಸ ಮಾಡಿದ್ದು, ಕಣ್ಣೂರಿಗೆ ವಿಸ್ತರಣೆ ಆದ ರೈಲು ಇದೀಗ ಕೊಯಿಕ್ಕೋಡ್ ಗೆ ರೈಲು ವಿಸ್ತರಣೆ ಆಗಿದೆ.ಈ ರೈಲು ಕಣ್ಣೂರಿಗೆ ವಿಸ್ತರಣೆ ಆದ ಬಳಿಕ, ಆ ಎಂಟು ಬೋಗಿಗಳಲ್ಲಿ ಕೇರಳದ ಪ್ರಯಾಣಿಕರೇ ತುಂಬಿರುತ್ತಾರೆ. ಈಗ ಕೊಯಿಕ್ಕೋಡ್‌ಗೆ ರೈಲು ವಿಸ್ತರಣೆ ಆದರೆ ಮಂಗಳೂರಿನ ಜನರು ತಮ್ಮ ಕೋಟಾದ ಮತ್ತಷ್ಟು ಸೀಟು ಕಳೆದುಕೊಳ್ಳಬೇಕಾಗುತ್ತದೆ ಎಂಬುದು ರೈಲ್ವೆ ಹೋರಾಟಗಾರರ ಆತಂಕ.

    ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ರಾತ್ರಿ 9.35ಕ್ಕೆ ಹೊರಡುವ ಈ ರೈಲು ಮರುದಿನ ಬೆಳಿಗ್ಗೆ 10.55ಕ್ಕೆ ಕಣ್ಣೂರು ತಲುಪಲಿದೆ. ಅಲ್ಲಿಂದ ಬೆಳಿಗ್ಗೆ 11ಕ್ಕೆ ಹೊರಟು ಮಧ್ಯಾಹ್ನ 12.40ಕ್ಕೆ ಕೊಯಿಕ್ಕೋಡ್‌ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 3.30ಕ್ಕೆ ಹೊರಟು ಸಂಜೆ 5ಕ್ಕೆ ಕಣ್ಣೂರು ತಲುಪಲಿದೆ. ಅಲ್ಲಿಂದ ಸಂಜೆ 5.05ಕ್ಕೆ ಹೊರಡು ಬೆಳಿಗ್ಗೆ 6.35ಕ್ಕೆ ಬೆಂಗಳೂರು ತಲುಪಲಿದೆ. ತಲಶ್ಶೇರಿ, ವಡಗರ ಹಾಗೂ ಕುಯಿಲಾಂಡಿಗಳಲ್ಲಿ ವಾಣಿಜ್ಯ ನಿಲುಗಡೆ ನೀಡುವುದಕ್ಕೂ ಸಚಿವಾಲಯ ಒಪ್ಪಿಗೆ ಸೂಚಿಸಿದೆ.

    ಹೊಸ ವೇಳಾಪಟ್ಟಿ ಯಾವತ್ತಿನಿಂದ ಆರಂಭವಾಗಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದಷ್ಟು ಬೇಗ ಸೂಕ್ತ ದಿನಾಂಕ ನಿಗದಿ ಪಡಿಸಿ ಈ ಮಾರ್ಪಾಡನ್ನು ತುರ್ತಾಗಿ ಜಾರಿಗೆ ತರುವಂತೆ ಸೂಚಿಸಿ ರೈಲ್ವೆ ಮಂಡಳಿಯು ದಕ್ಷಿಣ ರೈಲ್ವೆ ಹಾಗೂ ನೈರುತ್ಯ ರೈಲ್ವೆ ವಲಯಗಳಿಗೆ ಜ.23ರಂದು ಪತ್ರ ಬರೆದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply