Connect with us

LATEST NEWS

 ಆತ್ಮಹತ್ಯೆಯ ನಗರವಾಗುತ್ತಿರುವ ಮಂಗಳೂರು..!!

 ಆತ್ಮಹತ್ಯೆಯ ನಗರವಾಗುತ್ತಿರುವ ಮಂಗಳೂರು..!!

ಮಂಗಳೂರು, ಸೆಪ್ಟೆಂಬರ್ 30 :  ನಗರದ ಹೊರ ವಲಯದ ವಳಚ್ಚಿಲ್ ಶ್ರೀನಿವಾಸ ಇಂಜಿನೀಯರಿಂಗ್ ಕಾಲೇಜಿನ 3 ನೆ ಸೆಮಿಸ್ಟರ್ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಶನ್ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದ ಶರತ್ ಬಾಬು (20) ಆತ್ಮಹತ್ಯೆಗೆ ಶರಣಾಗಿದ್ದಾನೆ.

ನಿನ್ನೆ ತಡ ರಾತ್ರಿ ತಾನು ವಾಸವಾಗಿದ್ದ ಮೇರ್ಲಪದವಿನ ಪಿಲಿಪ್ ಎಂಬವರ ಪಿಜಿಯ ಕೋಣೆಯಲ್ಲಿ ಈತ ನೇನಿಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದಿಲ್ಲ , ಬೆಂಗಳೂರು ಮೂಲದವನಾಗಿದ್ದ ಶರತ್ ಕಲಿಕೆಯಲ್ಲಿ ಒಳ್ಳೆ ಆಸಕ್ತಿ ಹೊಂದಿದ್ದನು ಎಂದು ಆತನ ಸಹಪಅಠಿಗಳು ತಿಳಿಸಿದ್ದು,

ತನಿಖೆಯ ಬಳಿಕ ನಿಖರ ಕಾರಣಗಳನ್ನು ಕಂಡುಕೊಳ್ಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಕಾಲೇಜು ಆಡಳಿತ ಮಂಡಳಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಈ ವಿದ್ಯಮಾನಗಳಿಂದ ಆತಂಕಿತರಾಗಿದ್ದಾರೆ.

ಇದನ್ನು ತಡೆಗಟ್ಟಲು ಕ್ರಮಕ್ಕೆ ಮುಂದಾಗದಿದ್ದಲ್ಲಿ ಎಜ್ಯುಕೆಶನ್ ಹಬ್ ಎಂದಿದ್ದ ದಕ್ಷಿಣ ಕನ್ನಡ ಜಿಲ್ಲೆ ಆತ್ಮಹತ್ಯೆಯ ಜಿಲ್ಲೆಯಾಗಿ ಮಾರ್ಪಡುವ ದಿನಗಳು ದೂರವಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *