Connect with us

DAKSHINA KANNADA

ಧರ್ಮಸ್ಥಳದಲ್ಲಿ ಭಜನಾ ಕಮ್ಮಟ ಸಮಾರೋಪ : ಕಮ್ಮಟದಲ್ಲಿ ಪಾಲ್ಗೊಂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಧರ್ಮಸ್ಥಳದಲ್ಲಿ ಭಜನಾ ಕಮ್ಮಟ ಸಮಾರೋಪ : ಕಮ್ಮಟದಲ್ಲಿ ಪಾಲ್ಗೊಂಡ ಪವರ್ ಸ್ಟಾರ್ ಪುನೀತ್ ರಾಜ್ 

ಪುತ್ತೂರು, ಸೆಪ್ಟೆಂಬರ್ 30 : ಭಜನೆಗೆ ಪ್ರಾಮುಖ್ಯತೆ ಕೊಡುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ ನಡೆಯಿತು.

ಕಳೆದ ಅನೇಕ ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನ ಕಮ್ಮಟಗಳನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸುತ್ತಾ ಬಂದಿದೆ,

ಸಪ್ಟೆಂಬರ್23 ರಿಂದ ಆರಂಭವಾಗಿರುವ ತರಬೇತಿ ಕಮ್ಮಟ ಇಂದು ಸಮಾರೋಪವಾಗಿದ್ದು ಖ್ಯಾತ ಕನ್ನಡ ಚಿತ್ರನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಭಾಗವಹಿಸಿದ್ದರು.

ಭಜನಾ ಕಮ್ಮಟದಲ್ಲಿ 157 ಭಜನಾ ಮಂಡಳಿಯ 281 ಸದಸ್ಯರಿದ್ದು,186ಪುರುಷ ಮತ್ತು 95 ಮಹಿಳಾ ಶಿಬಿರಾರ್ಥಿಗಳನ್ನು ಒಳಗೊಂಡಿದ್ದರು.

ಬೆಳಗ್ಗೆ ಯೋಗ ,ಮಧ್ಯಾಹ್ನ ಉಪನ್ಯಾಸ ಸಂಜೆಯ ವೇಳೆಗೆ ನಗರ ಸಂಕೀರ್ತನೆಯ ಮೂಲಕ ತರಬೇತಿ ನಡೆಯುತ್ತಿತ್ತು.

ಸಮಾರೋಪದ ಅಂಗವಾಗಿ ಧರ್ಮಸ್ಥಳ ಮುಖ್ಯ ದ್ವಾರದಿಂದ ಅಮೃತವರ್ಷಿಣಿ ಸಭಾಭವನದವರೆಗೆ 300 ಭಜನಾ ತಂಡಗಳ 3000 ಭಜಕರು ಪಾಲ್ಗೊಂಡು ದಾಖಲೆ ನಿರ್ಮಿಸಿದ್ದರು.

ಅತ್ಯಕರ್ಷವಾದ ಶೋಭಾ ಯಾತ್ರೆ ಎಲ್ಲ ಮೆಚ್ಚುಗೆಗೆ ಪಾತ್ರವಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ. ವಿರೇಂದ್ರ ಹೆಗ್ಗಡೆ ಅವರ ದಿವ್ಯ ಉಪಸ್ಥಿತಿಯಲ್ಲಿ ಭಜನಾರ್ಥಿಗಳ ಅಮೋಘ ಪ್ರದರ್ಶನ ಕೂಡ ನಡೆಯಿತು.

ವಿಡಿಯೋಗಾಗಿ….