DAKSHINA KANNADA
ಮಂಗಳೂರು : ಬಜಾಲ್-ನಂತೂರು ಹಯಾತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳ ಮೂರು ದಿನದ ‘ಮೀಲಾದ್ ಪ್ರತಿಭೋತ್ಸವ’ ಸಮಾಪನ
ಮಂಗಳೂರು : ಬಜಾಲ್-ನಂತೂರು ಬದ್ರಿಯಾ ಜುಮಾ ಮಸೀದಿ ಅಧೀನದ ಹಯಾತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳ ಮೂರು ದಿನದ ‘ಮೀಲಾದ್ ಪ್ರತಿಭೋತ್ಸವ’ ರವಿವಾರ ಮಸೀದಿ ವಠಾರದಲ್ಲಿ ಸಮಾಪನಗೊಂಡಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ನಾಸೀರ್ ಸಅದಿ, ಮಕ್ಕಳು ಪ್ರತಿಭಾವಂತರಾಗಲು ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವು ಅಗತ್ಯ. ಮದ್ರಸ ಶಿಕ್ಷಣ ಪಡೆದವರು ಅಹಂಕಾರಿ ಆಗಲಾರರು. ಯುವ ಹೃದಯಗಳಲ್ಲಿ ಧಾರ್ಮಿಕ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ತಿಳಿಹೇಳಬೇಕು. ಅಹಿಂಸಾ ಮನೋಭಾವ ಮೂಡಿಸಬೇಕು. ಮಾದಕ ಪದಾರ್ಥ ಬಳಕೆ ಇಸ್ಲಾಮಿನಲ್ಲಿ ನಿಷಿದ್ಧವಾಗಿದ್ದು, ಇದರ ವಿರುದ್ಧ ಜಾಗೃತಿ ಮತ್ತಷ್ಟು ನಡೆಯಬೇಕು ಎಂದು ಹೇಳಿದರು.
ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರವೂಫ್ ಮಾತನಾಡಿ, ಇಸ್ಲಾಂನ ಧಾರ್ಮಿಕ ವಿಚಾರಗಳನ್ನು ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡಬೇಕು. ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಜಮಾಅತ್ ವತಿಯಿಂದ ಮಾಡಲಿದ್ದು, ಪೋಷಕರ ಸಹಕಾರ ಅಗತ್ಯ ಎಂದರು.
ಈ ವೇಳೆ ಬಿ.ಜೆ.ಎಂ ವತಿಯಿಂದ ಕಳೆದ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.95ರಷ್ಟು ಅಂಕ ಪಡೆದ ಬದ್ರಿಯಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಹನ್ಸಿದಾ ಬಾನು ಅವರನ್ನು ಗೌರವಿಸಲಾಯಿತು.ಜೆ.ಎಫ್ ಅಸೋಶಿಯೇಷನ್ ಬಜಾಲ್, ಕಿದ್ಮತುಲ್ ಇಸ್ಲಾಂ ಖುತುಬಿಯ್ಯತ್ ಕಮಿಟಿ ವತಿಯಿಂದ ಹಯಾತುಲ್ ಇಸ್ಲಾಂ ಮದ್ರಸ ಅಧ್ಯಾಪಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಿ.ಜೆ.ಎಂ ಉಪಾಧ್ಯಕ್ಷ, ಬಜಾಲ್ ಕಾರ್ಪೊರೇಟರ್ ಅಶ್ರಫ್.ಕೆ, ಬಿ.ಜೆ.ಎಂ ಉಪಾಧ್ಯಕ್ಷರಾದ ಎಚ್.ಎಸ್.ಹನೀಫ್, ಎಂ.ಎಚ್.ಮೊಹಮ್ಮದ್, ಫೈಸಲ್ ನಗರ ಗೌಸಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್, ಬಿ.ಜೆ.ಎಂ ಮಾಜಿ ಅಧ್ಯಕ್ಷ ಬಿ.ಎನ್.ಅಬ್ಬಾಸ್, ಸಂಚಾಲಕ ಬಿ.ಫಕ್ರುದ್ದೀನ್, ಪ್ರಧಾ, ಕಾರ್ಯದರ್ಶಿ ಅಬ್ದುಲ್ ಹಮೀದ್, ಕೋಶಾಧಿಕಾರಿ ಅಬ್ದುಲ್ ಸಲಾಂ, ನಝೀರ್ ಬಜಾಲ್, ಇಕ್ಬಾಲ್ ಅಹ್ ಸನಿ, ಯೂಸುಫ್ ಕುಂಬ್ಲಳಿಕೆ, ಹನೀಫ್ ಕೆಳಗಿನಮನೆ, ಮೊಯ್ದೀನ್ ಕುಂಞಿ, ಹನೀಫ್ ಬೈಂಕಪಾಡಿ, ಜೆ.ಎ.ಫ್ ಅಸೋಶಿಯೇಷನ್ ಉಪಾಧ್ಯಕ್ಷ ಸೌಕತ್ ಇಬ್ರಾಹೀಂ, ಮೊಹಮ್ಮದ್ ಹಕೀಝ್, ಬಜಾಲ್ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಹಮ್ಮಬ್ಬ ಮೋನಾಕ, ಫೈಸಲ್ ನಗರ ಗೌಸಿಯಾ ಜುಮಾ ಮಸೀದಿಯ ಖತೀಬ್ ಝುಬೈರ್ ದಾರಿಮಿ, ಶಾಂತಿನಗರದ ತರ್ಬಿಯತುಲ್ ಇಸ್ಲಾಮಿನ ಮುದರ್ರಿಸ್ ಮಿಕ್ದಾದ್ ಹಾಶಿಮಿ, ಅಬ್ದುಲ್ ರಹಿಮಾನ್ ಮದನಿ, ಸಮೀರ್ ಸಅದಿ ಮತ್ತಿತರರು ಉಪಸ್ಥಿತರಿದ್ದರು.
ಹಯಾತುಲ್ ಇಸ್ಲಾಂ ಮದ್ರಸದ ಅಧ್ಯಾಪಕ ಅಬ್ದುಲ್ ಹಕೀಂ ಮದನಿ ಕಾರ್ಯಕ್ರಮ ನಿರೂಪಿಸಿದರು, ಅಬೂಬಕ್ಕರ್ ಸಖಾಫಿ ವಂದಿಸಿದರು.