Connect with us

LATEST NEWS

ಮಂಗಳೂರು : ಶಿಕ್ಷಕ ಸಮುದಾಯಕ್ಕೆ ಮತ್ತೊಂದು ಅಘಾತ,ಸಂತ ಅಲೋಸಿಯಸ್ ಕಾಲೇಜು  ಉಪನ್ಯಾಸಕಿ ರಚಿತಾ ಕಬ್ರಾಲ್ ನಿಧನ..!

ಮಂಗಳೂರು : ಮಂಗಳೂರಿನ ಶಿಕ್ಷಕ ಸಮುದಾಯಕ್ಕೆ ಮತ್ತೊಂದು ಅಘಾತ  ತಂದಿದ್ದು ಗ್ಲೋರಿಯಾ ರೋಡ್ರಿಗಸ್ ಅಕಾಲಿಕ ಮರಣದ ಬಳಿಕ ಸಂತ ಅಲೋಸಿಯಸ್ ಕಾಲೇಜಿನ ಮತ್ತೊಂದು ಉಪನ್ಯಾಸಕಿ ನಿಧನರಾಗಿದ್ದಾರೆ.

 ಉಪನ್ಯಾಸಕಿ ರಚಿತಾ ಕಬ್ರಾಲ್ (42) ಬುಧವಾರ ಇಹಲೋಕ ತ್ಯಜಿಸಿದ್ದಾರೆ. ಅವರು ತಮ್ಮ ಏಕೈಕ ಪುತ್ರಿ ಮತ್ತು ಸಹೋದರರನ್ನು ದುಃಖದ ಮಡುವಿನಲ್ಲಿ ಬಿಟ್ಟು ಅಗಲಿದ್ದಾರೆ.  ಕೆಲ ದಿನಗಳ ಹಿಂದೆಯಷ್ಟೇ ಅಲರ್ಜಿಗೆ ಸಂಬಂಧಿಸಿದ ಅನಾಫಿಲ್ಯಾಕ್ಸಿಸ್ ರಿಯಾಕ್ಷನ್ ನಿಂದ  23 ವರ್ಷದ ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಸ್ ಮೃತಪಟ್ಟಿದ್ದರು. ವಾರದ ಅಂತರದಲ್ಲಿ ಇಬ್ಬರು ಉಪನ್ಯಾಸಕಿಯರು ಅಕಾಲಿಕ ಮರಣಕ್ಕೆ ತುತ್ತಾಗಿರುವುದು ಶೈಕ್ಷಣಿಕ ಸಮುದಾಯ ಮತ್ತು ಸ್ನೇಹಿತರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

1981 ರ ಡಿಸೆಂಬರ್ 11 ರಂದು ಜನಿಸಿದ ರಚಿತಾ ಅವರು ಮಂಗಳೂರು ಬಲ್ಮಠದ ದಿವಂಗತ ಹ್ಯಾನಿಬಲ್ ಕಬ್ರಾಲ್ ಮತ್ತು ಶೈಲಿನಿ ಕಬ್ರಾಲ್ ಅವರ ಪ್ರೀತಿಯ ಪುತ್ರಿಯಾಗಿದ್ದರು. ಅವರು  ರೋಶನಿ ನಿಲಯದಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ತಮ್ಮ ಶೈಕ್ಷಣಿಕ ವೃತ್ತಿಯನ್ನು ಪ್ರಾರಂಭಿಸಿದರು. ಉತ್ಸಾಹ ಮತ್ತು ಬದ್ಧತೆಗೆ ಹೆಸರುವಾಸಿಯಾಗಿದ್ದ ರಚಿತಾ ರೋಶನಿ ನಿಲಯದಲ್ಲಿ ಕಾರ್ಯನಿರ್ವಹಿಸುವ ಸಮಯದಲ್ಲಿ ಹೊರಾಂಗಣ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು, ಕಲಿಕೆಯ ಭೋಧನೆಯಲ್ಲೂ ಹೊಸತನ ಬಯಸುತ್ತಿದ್ದ ಆಕೆ  ನವೀನ ಅಭ್ಯಾಸಗಳ ಮೂಲಕ ವಿದ್ಯಾರ್ಥಿಗಳನ್ನು ಕಲಿಕೆಯತ್ತ ಪ್ರೇರರೇಪಿಸುತ್ತಿಸುತ್ತಿದ್ದರು ಬಳಿಕ ಮೂಡಬಿದ್ರಿಯ ಅಲ್ವಾಸ್ ಕಾಲೇಜ್ಗೆ ನಲ್ಲಿ ವೃತ್ತಿ ಮುಂದುವರೆಸಿ ಅಲ್ಲಿಂದ ನಗರದ  ಸಂತ ಅಲೋಸಿಯಸ್ ಕಾಲೇಜಿನಲ್ಲಿ  ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಅಕಾಲಿಕ ನಿಧನಕ್ಕೆ ಶೈಕ್ಷಣಿಕ ಸಮುದಾಯ ಮತ್ತು ಸ್ನೇಹಿತರು ಶೋಕ ವ್ಯಕ್ತಪಡಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *