LATEST NEWS
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ವದಂತಿ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ವದಂತಿ
ಮಂಗಳೂರು ಸೆಪ್ಟೆಂಬರ್ 19: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ವದಂತಿ ಹರಡಿ ಕೆಲಕಾಲ ವಿಮಾನ ಪ್ರಯಾಣಿಕರು ಆತಂಕಗೊಂಡಿದ್ದರು.
ಪ್ರಯಾಣಿಕರ ಸ್ಕ್ರೀನಿಂಗ್ ತಪಾಸಣಾ ವೇಳೆ ಬಾಂಬ್ ಪತ್ತೆಯಾಗಿದೆ ಎಂದು ವದಂತಿ ಹಬ್ಬಿತ್ತು. ತೀವೃ ತಪಾಸಣೆ ನಡೆಸಿದ ನಂತರ ಬಾಂಬ್ ಅಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗ್ ನ್ನು ಸ್ಕ್ರೀನಿಂಗ್ ತಪಾಸಣೆ ಮಾಡಲಾಗುವ ವೇಳೆ ಸ್ಫೋಟಕ ವಸ್ತುಗಳಿಗೆ ಬರುವ ಮಾಧರಿ ಭೀಪ್ ಸೌಂಡ್ ಬಂದಿದೆ.
ನಂತರ ಅಧಿಕಾರಿಗಳು ಹೆಚ್ಚಿನ ತಪಾಸಣೆ ಮಾಡಿದಾಗ ಬ್ಯಾಗ್ ನಲ್ಲಿ ಪವರ್ ಬ್ಯಾಂಕ್ ಪತ್ತೆ ಯಾಗಿದೆ. ಮೊಬೈಲ್ ಚಾರ್ಜ್ ಮಾಡಲು ಬಳಸುವ ಪವರ್ ಬ್ಯಾಂಕ್ ಇದಾಗಿದ್ದು ಇದನ್ನು ಮಂಗಳೂರಿನಿಂದ ಕೊಲ್ಲಿ ರಾಷ್ಟ್ರ ದುಬೈಗೆ ಒಯ್ಯುತ್ತಿದ್ದ ಕಣ್ಣೂರಿನ ವ್ಯಕ್ತಿಯನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ಬಳಿಕ ಬಿಡುಗಡೆ ಮಾಡಿದ್ದಾರೆ.
You must be logged in to post a comment Login