LATEST NEWS
ಮಂಗಳೂರು ವಿಮಾನ ನಿಲ್ದಾಣದಲ್ಲಿ 1.26 ಕೆಜಿ ಚಿನ್ನ ವಶಕ್ಕೆ

ಮಂಗಳೂರು ಡಿಸೆಂಬರ್ 31: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವರ್ಷದ ಕೊನೆಯ ದಿನ ಭರ್ಜರಿ ಬೇಟೆಯಾಡಿದ್ದು, ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ 64 ಲಕ್ಷ ಮೌಲ್ಯದ ಅಕ್ರಮ ಚಿನ್ನವನ್ನು ವಶಕ್ಕೆ ಪಡೆದಿದ್ದು ಇಬ್ಬರು ಬಂಧಿಸಿದ್ದಾರೆ.
ಬಂಧಿತರು ಇಬ್ಬರು ತಲಪಾಡಿ ಹಾಗೂ ಪಡೀಲ್ ನ ನಿವಾಸಿಗಳಾಗಿದ್ದಾರೆ. ಇಬ್ಬರು ಆರೋಪಿಗಳು ನಿನ್ನೆ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸುಮಾರು 1.26 ಕೆಜಿ ಚಿನ್ನವನ್ನು ಪೌಡರ್ ರೂಪದಲ್ಲಿ ತಮ್ಮ ದೇಹದಲ್ಲಿ ಅಡಗಿಸಿಟ್ಟುಕೊಂಡು ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸಿದ್ದಾರೆ.

ಪಡೀಲ್ ನಿವಾಸಿ ಸುಮಾರು 504.72 ಗ್ರಾಂ ಚಿನ್ನವನ್ನು ಮಾತ್ರೆ ರೂಪದಲ್ಲಿ ತನ್ನ ದೇಹದಲ್ಲಿ ಅಡಗಿಸಿ ಅಕ್ರಮ ಸಾಗಾಟಕ್ಕೆ ಯತ್ನಿಸಿದ್ದರೆ. ಮತ್ತೊಬ್ಬ ತಲಪಾಡಿಯ ನಿವಾಸಿ ಸುಮಾರು 756 ಗ್ರಾಂ ಚಿನ್ನವನ್ನು ಪೌಡರ್ ರೂಪದಲ್ಲಿ ಸಾಗಾಟಕ್ಕೆ ಯತ್ನಿಸಿದ್ದು, ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಇಬ್ಬರು ಆರೋಪಿಗಳನ್ನುಬಂಧಿಸಲಾಗಿದ್ದು, ಬಂಧಿತರಿಂದ ಸುಮಾರು 1.26 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಚಿನ್ನದ ಮೌಲ್ಯ ಸುಮಾರು 64.13 ಲಕ್ಷ ಎಂದು ಅಂದಾಜಿಸಲಾಗಿದೆ.