Connect with us

    DAKSHINA KANNADA

    ಮಂಗಳೂರು : ಸ್ಕೂಟಿ ಸವಾರನಿಗೆ ಸೀಟ್ ಒಳಗೆ ಅಡಗಿ ಕುಳಿತಿದ್ದ ವಿಷಕಾರಿ ಹಾವು ಕಚ್ಚಿದಾಗ..!!

    ಮಂಗಳೂರು : ಸ್ಕೂಟಿ ಸೀಟ್ ಒಳಗೆ ಅಡಗಿ ಕುಳಿತಿದ್ದ ವಿಷಕಾರಿ ಕನ್ನಡಿ ಹಾವು ವಾಹನ ಸವಾರನಿಗೆ ಕಚ್ಚಿದ ಘಟನೆ ಮಂಗಳೂರು ಹೊರವಲಯದ ಕುಪ್ಪೆಪದವಿನಲ್ಲಿ ನಡೆದಿದೆ.

    ಕುಪ್ಪೆಪದವಿನ ಇಮ್ತಿಯಾಜ್ ವಿಷಕಾರಿ ಕನ್ನಡಿ  ಹಾವಿನ ಕಡಿತಕ್ಕೊಳಗಾದವರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇಮ್ತಿಯಾಝ್‌ ಅವರು ಶುಕ್ರವಾರ ರಾತ್ರಿ ಮಸೀದಿಗೆ ಹೋಗಲೆಂದು ತನ್ನ ಇಲೆಕ್ಟ್ರಿಕ್‌ ದ್ವಿಚಕ್ರ ವಾಹನದ ಸೀಟು ತೆರೆದು ವಾಹನದ ಕಾಗದ ಪತ್ರ ಇಡುತ್ತಿದ್ದ ವೇಳೆ ಅವರ ಕೈ ಬೆರಳಿಗೆ ಹಾವು ಕಚ್ಚಿದೆ. ತಕ್ಷಣ ಮನೆ ಮಂದಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.

    Russell viper

    ಭಾರತದ Big four venomous ಹಾವುಗಳಲ್ಲಿ ಒಂದಾದ ಕೊಳಕು ಮಂಡಲ ಭಾರತದ ಹಾವು ಕಡಿತದಿಂದ ಸಾವನ್ನಪ್ಪುವ ಪ್ರಕರಣಗಳಿಗೆ ಕಾರಣವಾಗುವ ಹಾವುಗಳಲ್ಲಿ ಅಗ್ರಸಾಲಿನಲ್ಲಿ ನಿಲ್ಲುತ್ತದೆ.

    Hemotoxin ವಿಷದ ಹಾವಾದ ಇದು ಕಚ್ಚಿದಾಗ ಸೂಕ್ತ ಚಿಕಿತ್ಸೆ ಕೊಡಸದಿದ್ದರೆ ವ್ಯಕ್ತಿ ಸಾಯುವ ಸಾಧ್ಯತೆ ಇರುವ ಜೊತೆಗೆ, ಸೂಕ್ತ ಚಿಕಿತ್ಸೆ ದೊರೆಯದಿದ್ದಾಗ ಕಚ್ಚಿದ ಭಾಗ ಗ್ಯಾಂಗ್ರೀನ್ ಆಗುವ ಸಾಧ್ಯತೆ ಇರುತ್ತದೆ. ಕೊಳಕು ಮಂಡಲ ಹಾವಿನಿಂದ ಕಚ್ಚಿಸಿಕೊಂಡ ಬಹಳಷ್ಟು ಜನ ಸೂಕ್ತ ಚಿಕಿತ್ಸೆ ಪಡೆಯದೆ ಗ್ಯಾಂಗ್ರಿನ್ ಆಗಿ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಈ ಹಾವಿನ ಕುರಿತು ಹೆಚ್ಚಿನ ಕುರಿತು ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ. ಸಾಮಾನ್ಯವಾಗಿ ಕೊಳಕುಮಂಡಲ ಹಾವುಗಳ ರಾತ್ರಿ ಸಮಯದಲ್ಲಿ ಹೆಚ್ಚಾಗಿ ಓಡಾಡುವ ಕಾರಣ, ರಾತ್ರಿ ಸಮಯ ಹೊರಗೆ ನಡೆದು ಹೋಗುವಾಗ ಕಡ್ಡಾಯವಾಗಿ ಟಾರ್ಚ್ ಲೈಟ್ ಗಳನ್ನು ಬಳಸಬೇಕಿದೆ. ಜೊತೆಗೆ ಮನೆಯ ಸುತ್ತಮುತ್ತ ಸಂದಿಕೊಂದಿಗಳು ಹೆಚ್ಚಾಗಿ ಇಲ್ಲದಂತೆ ನೋಡಿಕೊಳ್ಳುವುದು ಉತ್ತಮ.

    Share Information
    Advertisement
    Click to comment

    You must be logged in to post a comment Login

    Leave a Reply