DAKSHINA KANNADA
ಮಂಗಳೂರು : ನಗರದಲ್ಲಿ 2 ಪ್ರತ್ಯೇಕ ಅಗ್ನಿಅವಘಡ, ಲಕ್ಷಾಂತರ ರೂಪಾಯಿ ನಷ್ಟ..!
ಮಂಗಳೂರು : ಕ್ರಿಸ್‌ಮಸ್ ಹಬ್ಬದ ರಾತ್ರಿ ಮಂಗಳೂರಿನಲ್ಲಿ 2ಪ್ರತ್ಯೇಕ ಅಗ್ನಿ ಅವಘಡಗಳು ಸಂಭವಿಸಿದ್ದು, ಲಕ್ಷಾಂ ತರ ರೂಪಾಯಿಗಳ ನಷ್ಟ ಸಂಭವಿಸಿದೆ.
ನಗರದ ಮಣ್ಣಗುಡ್ಡ ಮಠದಕಣಿ ಮಿಷನ್ ಗೋರಿ ರಸ್ತೆ ಬಳಿ ಸಂದೀಪ್ ಎಂಬವರಿಗೆ ಸೇರಿದ ಅಂಗಡಿಯೊಂದಕ್ಕೆ ಸೋಮವಾರ ಮುಂಜಾನೆ 5. 30 ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿ ಶಾಮಕ ದಳ ಸಿಬಂದಿ ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ, ಘಟನೆಯಲ್ಲಿ 2 ಲಕ್ಷದಷ್ಟು ನಷ್ಟ ಸಂಭವಿಸಿದ್ದು, ಕಾರಣ ತಿಳಿದು ಬಂದಿಲ್ಲ.
ಮತ್ತೊಂದು ಅಗ್ನಿ ಅವಘಡ ನಗರದ ಉರ್ವ ಮಾರಿಗುಡಿ ದೇವಳದ ರಸ್ತೆಯಲ್ಲಿ ನಡೆದಿದೆ. ಬೆಂಕಿಯ ಕಾರಣ ಮೊಬೈಲ್ ಅಂಗಡಿ ಮತ್ತು ದಿನಸಿ ಅಂಗಡಿಗೆಯಲ್ಲಿ ಸೊತ್ತುಗಳು ಸುಟ್ಟು ಕರಕಲಾಗಿದ್ದು, ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿ ಶಾಮಕ ದಳ ಬಂದು ಬೆಂಕಿ ನಂದಿಸಿದ್ದಾರೆ, ಘಟನೆಗೆ ಸ್ಪಷ್ಟ ಕಾರಣ ತಿಳಿ ಬಂದಿಲ್ಲ ವಾದರೂ ವಿದ್ಯು ತ್ ಶಾರ್ಟ್ ಸರ್ಕಿಟ್ ನಿಂದ ಈ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದೆ.
You must be logged in to post a comment Login