Connect with us

  LATEST NEWS

  ರೈಲಿನಲ್ಲಿ ಯುವಕನನ್ನು ಬಾತ್​ರೂಮ್​ ಒಳಗಡೆ ಎಳೆದೊಯ್ದು ಲಾಕ್​ ಮಾಡಿಕೊಂಡ ಮಂಗಳಮುಖಿ!

  ಕೆಲವು ಮಂಗಳಮುಖಿಯರು ರೈಲಿನಲ್ಲಿ ಬಂದು ಪ್ರಯಾಣಿಕರಿಂದ ಹಣ ಕೇಳುವುದು ಸಾಮಾನ್ಯವಾಗಿದೆ. ಯಾರೂ ಕೆಲಸ ಕೊಡುವುದಿಲ್ಲ ಅಂತಾ ಬದುಕಲು ಬೇರೆ ದಾರಿ ಇಲ್ಲದೆ ಹಣ ಕೇಳುತ್ತಾರೆ. ಕೆಲವೊಮ್ಮೆ ಹಣ ಕೊಡದಿದ್ದರೆ ಅಸಭ್ಯವಾಗಿಯೂ ವರ್ತಿಸುವ ಮೂಲಕ ಟೀಕೆಗು ಗುರಿಯಾಗುತ್ತಾರೆ.

  ಆದರೆ, ಇಂತಹ ಘಟನೆ ನಗೆಪಾಟಲಿಗೀಡಾದರೂ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಇದನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆಯೂ ಇದೆ.

  ಏನಿದೆ ವಿಡಿಯೋದಲ್ಲಿ?
  ವಿಡಿಯೋದಲ್ಲಿ ರೈಲಿನ ಒಳಗೆ ಕೆಲವು ಯುವಕರು ಬಾತ್​ರೂಮ್​ ಬಾಗಿಲಿನ ಬಳಿ ನಿಂತಿದ್ದಾರೆ. ಅಲ್ಲಿ ಓರ್ವ ಮಂಗಳಮುಖಿ ಕೈ ಚಪ್ಪಾಳೆ ತಟ್ಟುತ್ತಾ ಯುವಕರ ಬಳಿಕ ಹಣ ಕೇಳುತ್ತಾಳೆ. ಆದರೆ, ಅಷ್ಟರಲ್ಲಿ ಏನಾಯಿತೋ ಬಾತ್​ರೂಂ ಪಕ್ಕದಲ್ಲೇ ನಿಂತಿದ್ದ ಹುಡುಗನನ್ನು ಬಲವಂತವಾಗಿ ಒಳಗಡೆ ಎಳೆದುಕೊಂಡು ಲಾಕ್ ಮಾಡಿಕೊಳ್ಳುತ್ತಾಳೆ. ಹೊರಗಡೆ ಇದ್ದ ಕೆಲವು ಯುವಕರು ಎಷ್ಟೇ ಹೊತ್ತು ಬಡಿದರೂ ಬಾಗಿಲು ತೆಗೆಯುವುದೇ ಇಲ್ಲ. ಸ್ವಲ್ಪ ಹೊತ್ತಿನ ನಂತರ ಪ್ಯಾಂಟ್​ ಸರಿಮಾಡಿಕೊಂಡು ಯುವಕ ಹೊರಬರುತ್ತಾನೆ. ಸ್ವಲ್ಪ ಸಮಯದ ಬಳಿಕ ಮಂಗಳಮುಖಿಯು ಹೊರಬಂದು ಮತ್ತೊಂದು ಬೋಗಿಗೆ ಹೋಗುತ್ತಾಳೆ.

  ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಆದರೆ, ಕೆಲವು ನೆಟ್ಟಿಗರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ರೈಲುಗಳಲ್ಲಿ ಭದ್ರತೆಯ ಕೊರತೆ ಇದೆ. ಮಂಗಳಮುಖಿಯರು ಮಿತಿ ಮೀರಿ ವರ್ತಿಸುತ್ತಿದ್ದಾರೆ ಎಂದು ಕೆಲವರು ಹೇಳಿಕೊಳ್ಳುತ್ತಾರೆ.

  ರೈಲಿನಲ್ಲಿ ಮಾತ್ರವಲ್ಲದೆ ಮದುವೆ ಮನೆಯಲ್ಲಿ, ಯಾವುದಾದರೂ ಶುಭ ಸಮಾರಂಭಗಳಲ್ಲಿ ಹತ್ತು ಹದಿನೈದು ಜನ ಬಂದು ಸಾವಿರಾರು ಹಣಕ್ಕೆ ಬೇಡಿಕೆ ಇಡುತ್ತಾರೆ, ಕೊಡದಿದ್ದರೆ ಮನಬಂದಂತೆ ವರ್ತಿಸುತ್ತಾರೆ. ಬಸ್​ಗಳಲ್ಲಿಯೂ ಮಂಗಳಮುಖಿಯರ ಕಾಟಕ್ಕೆ ಬೇಸತ್ತ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ.

  Share Information
  Advertisement
  Click to comment

  You must be logged in to post a comment Login

  Leave a Reply