LATEST NEWS
ಮಂಗಳಾದೇವಿ ದೇವಸ್ಥಾನದಲ್ಲಿ ಅಂಗಡಿ ಹರಾಜು ಪ್ರಕ್ರಿಯೆಯನ್ನು ಸ್ವಾಗತಿಸಿದ ವಿಎಚ್ ಪಿ
ಮಂಗಳೂರು ಅಕ್ಟೋಬರ್ 12: ಮಂಗಳೂರಿನ ಇತಿಹಾಸ ಪ್ರಸಿದ್ದ ಶ್ರೀಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಡೆಯಲಿದ್ದು, ಈ ವೇಳೆ ದೇವಸ್ಥಾನದ ರಥಬೀದಿಯಲ್ಲಿ ಅಂಗಡಿಗಳನ್ನು ಇಡಲು ಹರಾಜು ಪ್ರಕ್ರಿಯೆ ನಡೆಸಲಾಗಿದ್ದು, ಹಿಂದೂ ವ್ಯಾಪಾರಸ್ಥರ ಮನವಿಯಂತೆ ದೇವಸ್ಥಾನದ ಆಡಳಿತ ಮಂಡಳಿ ಹರಾಜು ಪ್ರಕ್ರಿಯೆ ನಡೆಸಿರುವುದನ್ನು ವಿಶ್ವಹಿಂದೂ ಪರಿಷತ್ ಸ್ವಾಗತಿಸಿದೆ.
ಧರ್ಮದಂಗಲ್ ಮತ್ತೆ ಕರಾವಳಿಯಲ್ಲಿ ಪ್ರಾರಂಭವಾಗುವ ಸಾದ್ಯತೆ ಕಾಣಿಸುತ್ತಿದ್ದು, ಇದೀಗ ಮಂಗಳಾದೇವಿ ಯಲ್ಲಿ ಅಕ್ಟೋಬರ್ 15ರಿಂದ 24ರವರೆಗೆ ನವರಾತ್ರಿ ಸಂಭ್ರಮ ನಡೆಯಲಿದ್ದು, ಸದ್ಯ ನವರಾತ್ರಿ ಸಿದ್ದತೆ ಹಿನ್ನೆಲೆಯಲ್ಲಿ ಅಂಗಡಿ ಜಾಗದ ಹಂಚಿಕೆ ಪ್ರಕ್ರಿಯೆ ಮುಗಿದಿದ್ದು, ದೇವಸ್ಥಾನದ ಮುಂಭಾಗದ ರಥಬೀದಿಯಲ್ಲಿ ವ್ಯಾಪಾರ ನಡೆಸಲು ಜಾಗ ಹಂಚಿಕೆಯಾಗಿದೆ.
ಈ ನಡುವೆ ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ಸಂತೆ ಮಾರಾಟದ ಅಂಗಡಿಗಳನ್ನು ಹರಾಜು ಮಾಡುವ ವೇಳೆ ಸ್ಥಳೀಯ ಬಿಡ್ ದಾರರಿಗೆ ಹರಾಜು ಮಾಡದೆ ದೇವಸ್ಥಾನ ಮುಖಾಂತರ ಎಲ್ಲರಿಗೂ ಸಂತೆ ನಡೆಸಲು ಬಹಿರಂಗ ಹರಾಜಿಗೆ ಮನವಿ ಮಾಡಿದ್ದರು. ಅದರಂತೆ ಇದೀಗ ಸಂಘದವರ ಮನವಿ ಗೆ ಸ್ಪಂದಿಸಿ ನೀಡಿರುವ ದೇವಸ್ಥಾನದ ಆಡಳಿತ ಮಂಡಳಿ ದೇವಸ್ಥಾನದಿಂದಲೇ ಪ್ರತಿ ಸ್ಟಾಲ್ ಗಳನ್ನು ಎಲಂ ಹರಾಜು ನಡೆಸಿದೆ. ಈ ಆದೇಶ ವನ್ನು ವಿಶ್ವ ಹಿಂದೂ ಪರಿಷತ್ ಸ್ವಾಗತಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಎಚ್ ಮುಖಂಡ ಶರಣ್ ಪಂಪ್ ವೆಲ್ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ದೇವಸ್ಥಾನಗಳ ಆಡಳಿತ ಮಂಡಳಿ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡು ಸಂತೆ ವ್ಯಾಪಾರವನ್ನು ಹಿಂದೂ ಜಾತ್ರಾ ವ್ಯಾಪಾರಸ್ಥ ಸಂಘದವರ ಮೂಲಕ ಹಿಂದೂ ವ್ಯಪಾರಿಗಳಿಗೆ ಮಾತ್ರ ಕೊಡಬೇಕಾಗಿ ವಿನಂತಿಸಿದ್ದಾರೆ.