Connect with us

LATEST NEWS

ಕೋಮು ದ್ವೇಷ ಹರಡಿಸುತ್ತಿದ್ದ ಮಂಗಳೂರು ಮುಸ್ಲಿಂ ಪೇಜ್ ಕೊನೆಗೂ ಬಂದ್

ಮಂಗಳೂರು ನವೆಂಬರ್ 20: ಸದಾ ಒಂದಿಲ್ಲೊಂದು ವಿವಾದಗಳಿಂದ ಕರಾವಳಿಯಲ್ಲಿ ಕೋಮುದ್ವೇಷ ಹರಡಲು ಹೊಂಚು ಹಾಕುತ್ತಿದ್ದ ಸಾಮಾಜಿಕ ಜಾಲತಾಣದ ಮಂಗಳೂರು ಮುಸ್ಲೀಂ ಪೇಜ್ ನ್ನು ಮುಚ್ಚಿಸಲು ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.
ಸದಾ ಒಂದಿಲ್ಲೊಂದು ವಿವಾದಗಳನ್ನೊಳಗೊಂಡ ಭಾವಚಿತ್ರಗಳನ್ನು ಅವಹೇಳನಕಾರಿ ಚಿತ್ರಿಸಿ ಹಿಂದೂಗಳ ಭಾವನೆಗೆ ಈ ಪೇಜ್ ಗಳು ದಕ್ಕೆ ತರುತ್ತಿದ್ದವು, ಅಲ್ಲದೆ ಪ್ರಧಾನಿ ಮೋದಿ, ಅಮಿತ್ ಶಾ ಅವರ ಭಾವಚಿತ್ರಗಳನ್ನು ಅವಹೇಳನಕಾರಿಯಾಗಿ ಚಿತ್ರಿಸಿ, ಇಬ್ಬರು ಕೊರೋನಾದಿಂದ ಶಾ ಮೃತಪಟ್ಟಿರುವುದಾಗಿ ಸುಳ್ಳು ಸುದ್ದಿ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.


ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ಪ್ರತಾಪ್ ಸಿಂಹ, ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಚಕ್ರವರ್ತಿ ಸೂಲಿಬೆಲೆ, ಶರಣ್ ಪಂಪ್ವೆಲ್ ಸೇರಿದಂತೆ ಸಂಘಪರಿವಾರದ ನಂಟು ಹೊಂದಿರುವ ವಿವಿಧ ನಾಯಕರುಗಳ ಭಾವಚಿತ್ರಗಳನ್ನು ಬಳಸಿ ಈ ಜಾಲತಾಣಗಳಲ್ಲಿ ತೇಜೋವಧೆ ಮಾಡಲಾಗುತ್ತಿತ್ತು.  ಈ ಕುರಿತಂತೆ ಹಲವಾರು ಸಂದರ್ಭ ಮಾಧ್ಯಮಗಳಲ್ಲಿ ವರದಿಯಾಗಿ, ವಿವಿಧ ಸಂಘಟನೆಗಳು ಪೊಲೀಸರಿಗೆ ದೂರು ಕೂಡ ಸಲ್ಲಿಸಿದ್ದವು. ಆದರೂ ಮಂಗಳೂರು ಮುಸ್ಲೀಂ ಪೇಜ್ ನ್ನು ಬಂದ್ ಮಾಡಲು ಪೊಲೀಸರಿಗೆ ಆಗಿರಲಿಲ್ಲ. ಈ ನಡುವೆ ಮಂಗಳೂರು ಆಯುಕ್ತರಾಗಿ ಆಗಮಿಸಿದ ಸಂದರ್ಭ ಪೊಲೀಸ್ ಕಮಿಷನರ್ ಹರ್ಷ ಅವರ ಮಾರ್ಗದರ್ಶನಲ್ಲಿ ಸಿಸಿಬಿ ಎಸ್ ಐ ಕಬ್ಬಾಳ್ ರಾಜ್ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.


ಬಳಿಕ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಯಾದವ್ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸುವಂತೆ ಮಾಡಿದ್ದರು. ಪರಿಣಾಮ ಒಂದೊಂದೇ ನಕಲಿ ಪೇಜ್ ಗಳು ಜಾಲತಾಣದಿಂದ ಮಾಯವಾಗಿದೆ.


ವಿದೇಶದಲ್ಲಿರುವ ಕೋಮು ದ್ವೇಷಿಗಳು ರಾಷ್ಟ್ರ, ರಾಜ್ಯ ನಾಯಕರ ವಿರುದ್ಧ ಅಶ್ಲೀಲ, ಅಸಭ್ಯ, ಅವಹೇಳನಕಾರಿಯಾಗಿ ಸಂದೇಶ ಬರೆದು ವಾಟ್ಪಸ್ ಗ್ರೂಪ್ ಗಳ್ಲಿ ಹಾಕುತ್ತಿದ್ದರು. ಗ್ರೂಪ್ ಗಳಲ್ಲಿರು ವವರಿಗೆ ಒಬ್ಬರಿಗೊಬ್ಬರು ವೈಯಕ್ತಿಕ ಪರಿಚಯ ಇರುತ್ತಿರಲಿಲ್ಲ. ಕೋಮು ಅಫೀಮು, ಮತಾಂಧತೆ ತುಂಬಿರುವವರನ್ನು ಆಕರ್ಷಿಸಿ ಲಿಂಕ್ ಮೂಲಕ ಗ್ರೂಪ್ ಗೆ ಸೇರಿಸಲಾಗುತ್ತಿತ್ತು. ಇದರಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳೇ ಇರುತ್ತಿದ್ದರು. ಅವರು ಇಂಥ ಪೇಜ್ ಗಳಿಗೆ ಅಪ್ ಲೋಡ್ ಮಾಡುತ್ತಿದ್ದರು ಎನ್ನುವುದು ಪೊಲೀಸ್ ತನಿಖೆಯ ವೇಳೆ ಬಹಿರಂಗವಾಗಿದೆ.


ಮೈಕಲ್ತೊ ಬಿಸಯ ಫೇಸ್ ಬುಕ್ ಪೇಜ್ ನಲ್ಲಿ ಪ್ರಧಾನಿ ಮೋದಿ ಸಹಿತ ಸಚಿವರ ವಿರುದ್ಧ ಅವಹೇಳನಕಾರಿಯಾಗಿ ಬರೆಯುತ್ತಿದ್ದ ಕಬಕ ಉರಿಮಜಲು ನಿವಾಸಿ ಅಬ್ದುಲ್ ಬಶೀರ್, ಪಣಕಜೆ ನಿವಾಸಿ ಮುಹಮ್ಮದ್ ಇಲ್ಯಾಸ್ ನನ್ನು ಅಂದಿನ ಪೊಲೀಸ್ ಕಮಿಷನರ್ ಹರ್ಷ ಅವರ ಮಾರ್ಗದರ್ಶನದಂತೆ ಸಿಸಿಬಿ ಎಸ್ ಐ ಕಬ್ಬಾಳ್ ರಾಜ್ ಬಂಧಿಸಿದ್ದರು.

ಇದು ನಮ್ಮ ಧ್ವನಿ ನಕಲಿ ಸುದ್ದಿ ವಾಹಿನಿ ಯಲ್ಲಿ ಫೇಕ್ ಸುದ್ದಿಗಳನ್ನು ಹಬ್ಬಿಸುತ್ತಿದ್ದ ಸಜಿಪಮೂಡದ ಎಸ್. ಕೆ. ಮೊಹಮ್ಮದ್ ಆಶ್ರಫ್ ಯಾನೆ ಪಠಾಣ್ ಎಸ್. , ಸಂಗಬೆಟ್ಟು ನಿವಾಸಿ ಶರಾಫುದ್ದೀನ್ ಎಂಬ ಆರೋಪಿಗಳನ್ನು ಸಿಸಿಬಿ ಎಸ್ಐ ಕಬ್ಬಾಳ್ ರಾಜ್ ಬಂಧಿಸಿದ್ದರು.
ದೇಶದ್ರೋಹಿ ಪೇಜ್ ಗಳನ್ನು ಮುಚ್ಚಿಸಿದ, ಮಂಗಳೂರಿನ ಡ್ರಗ್ಸ್ ಜಾಲ ಬೇಧಿಸಿದ, ಕ್ರಿಕೆಟ್ ಬುಕ್ಕಿಂಗ್ ದಂಧೆಯನ್ನು ಭೇದಿಸಿದ ಸಿಸಿಬಿ ಪೊಲೀಸ್ ಅಧಿಕಾರಿಗಳು ಸದ್ಯಕ್ಕೆ ವರ್ಗವಾಗಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *