Connect with us

    LATEST NEWS

    Gadar – 2 ಸಿನೆಮಾ  ನೋಡಲು ಹೋದವನಿಗೆ ಮಾಲ್‌ನಲ್ಲೇ ಹೃದಯಾಘಾತ..!

    ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿರುವ ಫನ್ ಮಾಲ್‌ಗೆ ಸಿನಿಮಾ ವೀಕ್ಷಿಸಲು ತೆರಳಿದ್ದ 35 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ. 
    ಲಖನೌ: ಇತ್ತೀಚೆಗೆ ವಿಶ್ವದಲ್ಲಿನ ಅಂಕಿ ಅಂಶಗಳು ಸಿಗದಿದ್ದರೂ ಭಾರತದಲ್ಲಿ ಕೊರೊನಾದ ಬಳಿಕ  ಹೃದಯಾಘಾತ, ಹೃದಯ ಸ್ತಂಭನ ಪ್ರಕರಣಗಳು ಹೆಚ್ಚಾಗುತ್ತಿವೆ.

    ಅದ್ರಲ್ಲೂ ಮಕ್ಕಳು, ಹದಿಹರೆಯದ ಯುವಕರು ಹೃದಯಾಘಾತಕ್ಕೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ.

    ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿರುವ ಫನ್ ಮಾಲ್‌ಗೆ ಸಿನಿಮಾ ವೀಕ್ಷಿಸಲು ತೆರಳಿದ್ದ 35 ವರ್ಷದ ವ್ಯಕ್ತಿಯೊಬ್ಬರು ಇದೇ ರೀತಿ ಹಠತ್ ಹೃದಯಾಘಾತದಿಂದ  ಮೃತಪಟ್ಟಿದ್ದಾರೆ.

    ಚಿತ್ರಮಂದಿರದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ.

    ಇತ್ತೀಚೆಗೆ ಬಿಡುಗಡೆಯಾದ ‘ಗದರ್-2’ ಚಿತ್ರದ ತಡರಾತ್ರಿ ಶೋ ವೀಕ್ಷಿಸಲು ಅವರು ಶನಿವಾರ ಸಿಟಿ ಮಾಲ್‌ನಲ್ಲಿರುವ ಚಿತ್ರಮಂದಿರಕ್ಕೆ ತಲುಪಿದ್ದರು ಎಂದು ತಿಳಿದುಬಂದಿದೆ.

    ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಘಟನೆಯ ಸಿಸಿಟಿವಿ ವಿಡಿಯೋದಲ್ಲಿ ಮಹೇವಗಂಜ್‌ನಲ್ಲಿ ಮೆಡಿಕಲ್ ಸ್ಟೋರ್ ನಡೆಸುತ್ತಿರುವ ಅಕ್ಷತ್ ತಿವಾರಿ ಅವರು ಫೋನ್‌ನಲ್ಲಿ ಮಾತನಾಡುತ್ತಾ ಮೆಟ್ಟಿಲು ಹತ್ತುತ್ತಿರುವುದನ್ನು ತೋರಿಸುತ್ತದೆ.

    ಅವರ ಮುಂದೆ ಇಬ್ಬರು ಯುವಕರು ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ನಂತರ ಅಕ್ಷತ್‌ ತಿವಾರಿ ಕುಸಿದು ನೆಲದ ಮೇಲೆ ಬೀಳುತ್ತಿರುವುದು ಕಂಡುಬಂದಿದೆ.

    ಅವರು ಕುಸಿದು ಬೀಳುವುದನ್ನು ನೋಡಿದ ಜನರು ಅವರನ್ನು ಪರೀಕ್ಷಿಸಲು ಜಮಾಯಿಸಿದರು. ಅಲ್ಲಿದ್ದ ಗಾರ್ಡ್‌ಗಳು ಮತ್ತು ಬೌನ್ಸರ್‌ಗಳು ಆತನ ಮುಖದ ಮೇಲೆ ನೀರು ಎರಚಿದರೂ ಆತ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.

    ಸಾವಿಗೆ ಪ್ರಾಥಮಿಕ ಕಾರಣ ಹೃದಯಾಘಾತ ಎಂದು ವರದಿಯಾಗಿದೆ.

    ಇನ್ನು, ಘಟನೆಯ ಸುತ್ತಲಿನ ಹೆಚ್ಚಿನ ವಿವರಗಳನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ.

    ಯುವಕರು ಇದ್ದಕ್ಕಿದ್ದಂತೆ ಕುಸಿದು ಬೀಳುವ ಮತ್ತು ಕೆಲವು ಸಂದರ್ಭಗಳಲ್ಲಿ ಸಾಯುವ ಪ್ರಕರಣಗಳು ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ಹೆಚ್ಚಾಗ್ತಿವೆ.

    ಇಂತಹ ಹಠಾತ್ ಹೃದಯಾಘಾತದ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಎಚ್ಚರಿಕೆ ನೀಡುತ್ತದೆ.

    ಹೃದ್ರೋಗದ ಕುಟುಂಬದ ಇತಿಹಾಸ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ಜೀವನಶೈಲಿಯ ಸಮಸ್ಯೆಗಳು, ಸ್ಥೂಲಕಾಯತೆ, ಒತ್ತಡ ಮತ್ತು ವ್ಯಾಯಾಮದ ಕೊರತೆಯಂತಹ ಸಹಬಾಳ್ವೆಯ ವೈದ್ಯಕೀಯ ಪರಿಸ್ಥಿತಿಗಳು ಯುವಜನರಲ್ಲಿ ಹೃದಯ ಸಮಸ್ಯೆಗಳಿಗೆ ಸಾಮಾನ್ಯ ಕಾರಣಗಳಾಗಿವೆ ಅಂಥ ಹೇಳ್ತಿದ್ದರೂ ಸ್ಪಷ್ಟ ಕಾರಣಗಳು ಮಾತ್ರ ಇನ್ನೂ ನಿಗೂಢವಾಗಿವೆ. .

    Share Information
    Advertisement
    Click to comment

    Leave a Reply

    Your email address will not be published. Required fields are marked *