Connect with us

    LATEST NEWS

    ಹೊಳಿ ಪಾರ್ಟಿ – ಕುಡಿದ ಮತ್ತಿನಲ್ಲಿ ತನಗೆ ತಾನೇ ಚಾಕುವಿನಿಂದ ಇರಿದುಕೊಂಡು ಸಾವನಪ್ಪಿದ ಯುವಕ

    ಇಂದೊರ್ : ಹೋಳಿ ಹಬ್ಬದ ಆಚರಣೆ ವೇಳೆ ಕಂಠಪೂರ್ತಿ ಕುಡಿದು ಕೈಯ್ಯಲ್ಲಿದ್ದ ಚಾಕುವಿನಿಂದ ತನಗೆ ತಾನೇ ಇರಿದುಕೊಂಡ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ.


    ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಬಂಗಂಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ 38 ವರ್ಷದ ಗೋಪಾಲ್‌ ತನ್ನ ತಂದೆ ಮತ್ತು ಕುಟುಂಬಸ್ಥರೊಂದಿಗೆ ಎಂಜಾಯ್‌ ಮಾಡುತ್ತಿದ್ದ. ಹೋಳಿ ದಹನ ಕಾರ್ಯಕ್ರಮದಲ್ಲಿ ಈತ ಪಾಲ್ಗೊಂಡಿದ್ದ. ಕುಣಿಯುತ್ತ ಕುಣಿಯುತ್ತ ಅರಿವಿಲ್ಲದೇ ತನ್ನ ಎದೆಗೆ ತಾನೇ ಚಾಕು ಇರಿದುಕೊಂಡಂತೆ ಸ್ಟಂಟ್‌ ಮಾಡಲು ಹೋಗಿದ್ದಾನೆ. ಮದ್ಯದ ನಶೆಯಲ್ಲಿದ್ದಿದ್ದರಿಂದ ಕಂಟ್ರೋಲ್‌ ಸಿಗದೆ ಚಾಕು ಅವನ ಎದೆಗೆ ಹೊಕ್ಕಿದೆ.

    ಜೇಬಿನಲ್ಲಿದ್ದ ಚಾಕು ತೆಗೆದು ಮೂರ್ನಾಲ್ಕು ಬಾರಿ ಇರಿದುಕೊಂಡಂತೆ ಆಕ್ಷನ್‌ ಮಾಡಿದ್ದಾನೆ. ಚಾಕು ಆಳವಾಗಿ ಎದೆಗೆ ಚುಚ್ಚಿಕೊಂಡು ರಕ್ತ ಸುರಿಯಲಾರಂಭಿಸಿದೆ. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

    Share Information
    Advertisement
    Click to comment

    You must be logged in to post a comment Login

    Leave a Reply