DAKSHINA KANNADA
ಮ್ಯಾನ್ ಆಫ್ ದಿ ಈಯರ್ ಗೆ ಆಯ್ಕೆಯಾದ ಮಂಗಳೂರು ಯುವಕ
ಮಂಗಳೂರು ಜುಲೈ : 31 ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಆಫ್ ದಿ ಈಯರ್ 2017 ಸ್ಪರ್ಧೆಗೆ ಮಂಗಳೂರಿನ ಯುವಕ ಅಲಿಸ್ಟರ್ ಡಿಸೋಜ ಆಯ್ಕೆಯಾಗಿದ್ದಾರೆ. ಆರು ಅಡಿ ಎರಡು ಇಂಚು ಎತ್ತರದ ಈ ಚೆಲುವ ಭಾರತದಲ್ಲಿ ನಡೆದ ಮಿಸ್ಟರ್ ಇಂಡಿಯಾ ಮ್ಯಾನ್ ಹಂಟ್ ಇಂಟರ್ ನ್ಯಾಶನಲ್ ನ ಅಂತಿಮ ಸುತ್ತಿನಲ್ಲಿ “ಮಿಸ್ಟರ್ ಸ್ಟೈಲ್” ಕಿರೀಟ ಪಡೆದು ಆಯ್ಕೆಗೊಂಡ ಏಕೈಕ ಅಭ್ಯರ್ಥಿಯಾಗಿದ್ದು, ಇಂಡೋನೇಶಿಯಾದಲ್ಲಿ ಅಗಸ್ಟ್ 11ರಿಂದ ಒಂಭತ್ತು ದಿನಗಳ ಕಾಲ ನಡೆಯಲಿರುವ ಪುರುಷರ ಈ ಅಂತಾರಾಷ್ಟ್ರೀಯ ಮಟ್ಟದ ಮ್ಯಾನ್ ಆಫ್ ದಿ ಈಯರ್ 2017 ರ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಲಿಸ್ಟರ್ ಭರದ ಸಿದ್ದತೆ ನಡೆಸುತ್ತಿದ್ದಾರೆ.
ಯುವತಿಯರಿಗೆ ನಡೆಯುವ ವಿಶ್ವಸುಂದರಿ ಸ್ಪರ್ಧೆ ಮಾದರಿಯಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಂದರ ಯುವಕರ ಆಯ್ಕೆಗಾಗಿ ಈ ಸ್ಪರ್ಧೆ ನಡೆಯುತ್ತಿದೆ. ಮೊದಲ ಸುತ್ತಿನಲ್ಲಿ ಆನ್ ಲೈನ್ ಮೂಲಕ ಸ್ಪರ್ಧಿಗಳನ್ನು ಗುರುತಿಸಿ ಆಯ್ಕೆ ಮಾಡಲಾಯಿತು. ಬಳಿಕ ದೇಶಾದ್ಯಂತದಿಂದ ಅಂತಿಮ ಸುತ್ತಿಗೆ ಆಯ್ಕೆಯಾದ 12 ಮಂದಿಗೆ ದೆಹಲಿಯಲ್ಲಿ 2016ರ ಸೆಪ್ಟೆಂಬರ್ ನಲ್ಲಿ ಕಾಂಪಿಟೇಶನ್ ಏರ್ಪಡಿಸಲಾಯಿತು. ಇದರಲ್ಲಿ “ಮಿಸ್ಟರ್ ಸ್ಟೈಲ್ ನೊಂದಿಗೆ ಇಂಟರ್ ನ್ಯಾಶನಲ್ ಸ್ಪರ್ಧೆಗೆ ಇವರು ಲಗ್ಗೆ ಇಟ್ಟಿದ್ದಾರೆ.
ಟೆಲಿಜೆನ್ಸ್, ಫಿಟ್ ನೆಸ್, ಫೋಟೋಸ್, ಐಕ್ಯೂ, ಪ್ರಶ್ನಾವಳಿ ಹೀಗೆ ನಾನಾ ಹಂತದ ಕಠಿಣ ಸವಾಲು ಎದುರಿಸಿ ಮುನ್ನುಗ್ಗಿ ಬಂದ ಅಲಿಸ್ಟರ್ ಗೆ ಬೆಂಗಳೂರಿನ ಅಶೋಕ್ ಮಾನೆ ಉಡುಪುಗಳ ವಿನ್ಯಾಸ ಮಾಡುತ್ತಿದ್ದಾರೆ. ಇದೀಗ ಆಂತಾರಾಷ್ಟ್ರೀಯ ಸ್ಪರ್ಧೆಗೆ ಕೂಡ ಮಾನೆಯವರು ಭಾರತ ದೇಶದ ಅಪ್ಪಟ ಸಾಂಪ್ರದಾಯಿಕ ಶೈಲಿಯ ಉಡುಪು ವಿನ್ಯಾಸದಲ್ಲಿ ತೊಡಗಿದ್ದಾರೆ.
ಎಂಜಿನಿಯರಿಂಗ್ ಪದವೀಧರರಾಗಿರುವ ಇವರು ಮಾಡೆಲಿಂಗ್ ರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂದು ಕನಸು ಹೊತ್ತು ಬೆಂಗಳೂರಿಗೆ ತೆರಳಿ ಬಾಡಿ ಫಿಟ್ ನೆಸ್, ಸ್ಟೈಲ್ ನ ತರಬೇತಿ ಪಡೆದಿದ್ದಾರೆ.ಈ ಬಗ್ಗೆ ಪ್ರತಿಕ್ರೀಯಿಸಿರುವ ಅವರು ಮಂಗಳೂರಿನ ಲೇಡಿಹಿಲ್ ಶಾಲೆಯಲ್ಲಿ ವಿರ್ದ್ಯಾಥಿಯಾಗಿದ್ದಾಗ ಕ್ರೀಡಾಪಟುವಾಗಿ ರೇಸಿಂಗ್ ನಲ್ಲಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸಿದ್ದೆ. ಮೈಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡುತ್ತಿದ್ದ ಸಂದರ್ಭ ಮಂಗಳೂರಿನಲ್ಲಿ ಫಿಟ್ ನೆಸ್ ಸೆಂಟರ್ ಗೆ ಹೋಗಿ ಅಭ್ಯಾಸ ಮಾಡುತ್ತಿದ್ದೆ. ಬಾಡಿ ಬಿಲ್ಡಿಂಗ್ ಸ್ಪರ್ಧೆಗೂ ಹೋಗಿದ್ದೆ. ಮಿಸ್ಟರ್ ಕೊಂಕಣ್ 2014 ಟೈಟಲ್ ಗಳಿಸಿದ್ದೆ. ಇತರರ ಬಾಡಿ ಫಿಟ್ ನೆಸ್ ನೋಡಿ ನಾನೂ ಮಾಡೆಲಿಂಗ್ ಮಾಡಬೇಕು ಎಂದು ಬಯಸಿದ್ದೆ. ಕಾಲೇಜು ಮುಗಿದು ಬೆಂಗಳೂರಿಗೆ ಹೋಗಿ ದಿನಕ್ಕೆ ಒಂದೂವರೆ ಗಂಟೆ ವರ್ಕ್ ಔಟ್ ಶುರುಮಾಡಿದೆ. ಮಾಡೆಲಿಂಗ್ ಕ್ಛೇತ್ರದಲ್ಲಿ ತೊಡಗಿಸಿಕೊಂಡೆ. ಇದೀಗ ಇಂಡೋನೇಶಿಯಾದಲ್ಲಿ ನಡೆಯಲಿರುವ ಮ್ಯಾನ್ ಆಫ್ ದಿ ಈಯರ್ ಇಂಡಿಯಾ- 2017 ಸ್ಪರ್ಧೆಗೆ ಸ್ಪರ್ಧಿಸುವ ಅವಕಾಶ ಲಭಿಸಿದೆ. ಭಾರತದಿಂದ ನಾನು ಏಕೈಕ ಅಭ್ಯರ್ಥಿಯಾಗಿ ಪ್ರತಿನಿಧಿಸುತ್ತಿದ್ದೇನೆ. ಸ್ಪರ್ಧೆಯ ಎಲ್ಲಾ ಖರ್ಚುಗಳನ್ನು ಇಂಡೋನೇಶಿಯಾದ ಸ್ಪರ್ಧೆಯ ಸಂಘಟಕರಾದ ಎಂಐಬಿಕ್ಯೂ ಭರಿಸುತ್ತಾರೆ ಎಂದರು.
ನಾನು ಮಂಗಳೂರಿನ ಬೊಂದೇಲ್ ನಿವಾಸಿಯಾದರೂ, ಬೆಂಗಳೂರಿನಲ್ಲಿ ಮಾಡೆಲಿಂಗ್ ಜಗತ್ತಿನಲ್ಲಿ ಕೆಲಸಮಾಡುತ್ತಿದ್ದೇನೆ. ಮುಂದೆ ನನ್ನದೇ ಆದ ಡಿಸೈನ್ ಸಂಸ್ಥೆ ಆರಂಭಿಸುವ ಉದ್ದೇಶವಿದೆ ಎಂದು ಅಲಿಸ್ಟರ್ ತನ್ನ ಕನಸು ಹಂಚಿಕೊಂಡರು.
ಕಳೆದ ಒಂದು ವರ್ಷಗಳಿಂದ ಇದಕ್ಕಾಗಿ ಪೂರ್ವಸಿದ್ಧತೆ, ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇಂಡೋನೇಶಿಯಾದ ಪೆಕನ್ ಬರು ಎಂಬಲ್ಲಿ ಸ್ಪರ್ಧೆ ನಡೆಯಲಿದೆ. ರಾಂಪ್ ವಾಕ್, ಸ್ಟಿಮ್ ಸೂಟ್ ನಲ್ಲಿ ಫೋಟೋಶೂಟ್, ಆಯಾ ದೇಶದ ಪಾರಂಪರಿಕ ವಸ್ತ್ರ ವಿನ್ಯಾಸದ ಪ್ರದರ್ಶನ, ಬುದ್ಧಿವಂತಿಕೆ, ರೂಪ ಹೀಗೆ ನಾನಾ ರೀತಿಯ ಪರೀಕ್ಷೆಗಳಿವೆ. ಎಲ್ಲಾ ಸವಾಲುಗಳನ್ನು ಸಮರ್ಥ ರೀತಿಯಲ್ಲಿ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ.