DAKSHINA KANNADA
ಉದನೆ ತೂಗು ಸೇತುವೆ ಬಳಿ ವ್ಯಕ್ತಿಯೊಬ್ಬರ ಬ್ಯಾಗ್ ಚಪ್ಪಲಿ ಪತ್ತೆ – ನದಿಗೆ ಹಾರಿರುವ ಶಂಕೆ..!!

ಪುತ್ತೂರು ಸೆಪ್ಟೆಂಬರ್ 18: ಉದನೆ ತೂಗುಸೇತುವೆಯಲ್ಲಿ ವಕ್ತಿಯೊಬ್ಬರ ಬ್ಯಾಗ್ ಹಾಗೂ ಚಪ್ಪಲಿ ಪತ್ತೆಯಾಗಿದ್ದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸೇತುವೆ ಬಳಿ ಬಿಟ್ಟಿರುವ ಬ್ಯಾಗ್ ನಲ್ಲಿ ಡ್ರೈವಿಂಗ್ ಲೈಸನ್ಸ್ ಪತ್ತೆಯಾಗಿದ್ದು ಅದರಲ್ಲಿ ರಮಣ, ತಂದೆ ಹೆಸರು: ಸುಬ್ರಹ್ಮಣ್ಯಂ, ಊರು: ಪುಟ್ಟಪರ್ತಿ ಎಂದಿದೆ. ಅಲ್ಲದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಂದು ಬರೆದಿದ್ದ ಡೆತ್‌ನೋಟ್ ಸಹ ಪತ್ತೆಯಾಗಿದೆ. ಸೆಪ್ಟೆಂಬರ್ 15ರಂದು ಧರ್ಮಸ್ಥಳದಿಂದ ಉದನೆಗೆ ಬಸ್ಸಿನಲ್ಲಿ ಪ್ರಯಾಣಿಸಿರುವ ಬಸ್ ಟಿಕೆಟ್ ಸಹ ಪತ್ತೆಯಾಗಿದೆ. ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
