LATEST NEWS
ಮಹಾಕುಂಭಮೇಳಕ್ಕೆ ಹೆಂಡತಿಯನ್ನು ಕರೆದೊಯ್ದು ಕೊಲೆ ಮಾಡಿ – ನಾಪತ್ತೆ ಕಥೆ ಕಟ್ಟಿದ ಪತಿ

ನವದೆಹಲಿ ಫೆಬ್ರವರಿ 24: ಮಹಾಕುಂಭಮೇಳಕ್ಕೆ ಹೆಂಡತಿಯನ್ನು ಕರೆದೊಯ್ದು, ಮಹಾಕುಂಭಮೇಳವೆಲ್ಲಾ ತಿರುಗಾಡಿ ಪೋಟೋ ವಿಡಿಯೋ ತೆಗೆದು ಕೊನೆಗೆ ಹೆಂಡತಿಯನ್ನು ಕತ್ತು ಸೀಳಿ ಕೊಲೆ ಮಾಡಿದ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಮೀನಾಕ್ಷಿ ಎಂದು ಗುರುತಿಸಲಾಗಿದೆ. ತ್ರಿಲೋಕಪುರಿ ನಿವಾಸಿಯಾದೆ ಈಕೆ ಫೆಬ್ರವರಿ 18 ರಂದು ತನ್ನ ಪತಿ ಅಶೋಕ್ ಕುಮಾರ್ ಜೊತೆಗೆ ಪ್ರಯಾಗ್ ರಾಜ್ ಗೆ ತೆರಳಿದ್ದರು. ಪ್ರಯಾಗರಾಜ್ ಕಮಿಷನರೇಟ್ ವ್ಯಾಪ್ತಿಯ ಜುನ್ಸಿ ಪ್ರದೇಶದಲ್ಲಿ ಫೆಬ್ರವರಿ 18 ರ ರಾತ್ರಿ ಈ ಬರ್ಬರ ಹತ್ಯೆ ನಡೆದಿತ್ತು. ಆದರೆ, ಘಟನೆ ನಡೆದ 48 ಗಂಟೆಗಳಲ್ಲಿ ಪ್ರಕರಣ ಭೇದಿಸಿರುವ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಅಶೋಕ್ ಕುಮಾರ್ ತಪ್ಪೊಪ್ಪಿಕೊಂಡಿದ್ದು, ಮೂರು ತಿಂಗಳಿಂದ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದಾಗಿ ಬಾಯ್ಬಿಟ್ಟಿದ್ದಾನೆ. ಪೂರ್ವ ದೆಹಲಿಯ ತ್ರಿಲೋಕಪುರಿಯಲ್ಲಿ ವಾಸವಾಗಿರುವ ಪೌರ ಕಾರ್ಮಿಕ ಅಶೋಕ್ ವಿವಾಹೇತರ ಸಂಬಂಧದಲ್ಲಿ ತೊಡಗಿಸಿಕೊಂಡಿದ್ದು, ತನ್ನ ಹೆಂಡತಿಯ್ನು ಸಾಯಿಸಿ, ತನ್ನ ಅಕ್ರಮ ಸಂಬಂಧ ಮುಂದುವರಿಸಲು ತಂತ್ರ ರೂಪಿಸಿದ್ದಾಗಿ ತಿಳಿಸಿದ್ದಾನೆ.
