Connect with us

BANTWAL

ಹಫ್ತಾ ಕೊಡಲು ನಿರಾಕರಣೆ, ಕಲ್ಲಡ್ಕದಲ್ಲಿ ವ್ಯಕ್ತಿ ಮೇಲೆ ಗಂಭೀರ ಹಲ್ಲೆ

ಹಫ್ತಾ ಕೊಡಲು ನಿರಾಕರಣೆ, ಕಲ್ಲಡ್ಕದಲ್ಲಿ ವ್ಯಕ್ತಿ ಮೇಲೆ ಗಂಭೀರ ಹಲ್ಲೆ

ಬಂಟ್ವಾಳ, ಸೆಪ್ಟಂಬರ್ 1: ಹಫ್ತಾ ಕೊಡಲು ನಿರಾಕರಿಸಿದ ವ್ಯಕ್ತಿಗೆ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಡೆದಿದೆ.

ಶುಕ್ರವಾರ ತಡರಾತ್ರಿ ಈ ಘಟನೆ ನಡಿದಿದ್ದು, ಆರೋಪಿ ರೌಡಿಶೀಟರ್ ಖಲೀಲ್ ನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.

ಕಲ್ಲಡ್ಕ ಪೇಟೆಯಲ್ಲಿ ಸೆಲೂನ್ ನಡೆಸುತ್ತಿರುವ ತಮಿಳು ಮೂಲದ ನಿವಾಸಿ ಸತೀಶ್ ಎನ್ನುವವರ ಅಂಗಡಿಗೆ ನುಗ್ಗಿದ ಖಲೀಲ್ ಮತ್ತು ಆತನ ತಂಡ ಹಫ್ತಾ ನೀಡುವಂತೆ ಒತ್ತಡ ಹೇರಿತ್ತು.

ಅಲ್ಲದೆ ಸೆಲೂನ್ ನ ಕ್ಯಾಶ್ ಬಾಕ್ಸ್ ನಿಂದ ಹಣವನ್ನೂ ಎಗರಿಸಿತ್ತು. ಆದರೆ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಸತೀಶ್ ಗೆ ಖಲೀಲ್ ಹಾಗೂ ಆತನ ತಂಡ ಗಂಭೀರವಾಗಿ ಹಲ್ಲೆ ನಡೆಸಿದೆ.

ವಿಷಯ ತಿಳಿದ ಜನರು ಪೇಟೆಯಲ್ಲಿ ಜಮಾಯಿಸಿದ್ದರಿಂದಾಗಿ ಮುಂಜಾಗೃತಾ ಕ್ರಮವಾಗಿ ಪೋಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದಾರೆ.

ಖಲೀಲ್ ಈ ಹಿಂದೆಯೂ ಕಲ್ಲಡ್ಕ ಪರಿಸರದಲ್ಲಿ ಕೋಮುಗಲಭೆಯಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿದ್ದು, ಇತ್ತೀಚೆಗಷ್ಟೇ ಈತನಿಗೆ ಪೋಲೀಸರು ಗಡೀಪಾರು ಶಿಕ್ಷೆಯನ್ನು ವಿಧಿಸಿದ್ದರು.

ಇದೀಗ ಶಿಕ್ಷೆ ಮುಗಿಸಿ ಮತ್ತೆ ಕಲ್ಲಡ್ಕಲ್ಲಿ ಗಾಂಜಾ ವ್ಯವಹಾರದಲ್ಲಿ ತೊಡಿಗಿಕೊಂಡು ಅಶಾಂತಿಗೆ ಕಾರಣವಾಗುತ್ತಿದ್ದಾನೆ ಎನ್ನುವ ಆರೋಪವೂ ಕೇಳಿ ಬರುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *