DAKSHINA KANNADA
ಕುಂಬಳೆ – ಬುರ್ಖಾ ಧರಿಸಿ ಮಹಿಳೆಯರ ಜೊತೆ ಕುಳಿತ ಯುವಕನಿಗೆ ಬಿತ್ತು ಧರ್ಮದೇಟು
ಕುಂಬಳೆ ನವೆಂಬರ್ 29: ಬುರ್ಖಾ ಧರಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸಮೀಪ ಕುಳಿತುಕೊಂಡಿದ್ದ ಯುವಕನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ಕುಂಬಳೆಯಲ್ಲಿ ನಡೆದಿದೆ.
ಓರಿಸ್ಸಾ ಮೂಲದ ಯುವಕ ಮುಸ್ಲಿಂ ಯುವತಿಯರಂತೆ ಬುರ್ಖಾ ಧರಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸಮೀಪ ಕುಳಿತಿದ್ದಾನೆ. ಈ ವೇಳೆ ಗಾಳಿಗೆ ಮುಖದ ಬಟ್ಟೆ ಹಾರಿದ ಪರಿಣಾಮ ಯುವಕ ಸಿಕ್ಕಿಬಿದ್ದಿದ್ದಾನೆ. ಈತನ ಚಲನವಲನದ ಬಗ್ಗೆ ಸಂಶಯ ಗೊಂಡ ಸ್ಥಳೀಯರು ಈತನ ಪಾದರಕ್ಷೆ ಹಾಗೂ ಪಾದವನ್ನು ವೀಕ್ಷಿಸಿ ಈತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ತನ್ನ ಗುರುತು ಹಚ್ಚಿದ್ದಾರೆಂದು ತೋರಿದ ಯುವಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದರೂ, ಅಷ್ಟರಲ್ಲಾಗಲೇ ಸ್ಥಳೀಯರು ಆತ ನನ್ನು ಹಿಡಿದಿದ್ದಾರೆ. ಈತ ಹಿಂದಿ ಭಾಷೆ ಮಾತನಾಡುತ್ತಿದ್ದ ಎಂದು ತಿಳಿದು ಬಂದಿದ್ದು, ಎರಡು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
1 Comment