LATEST NEWS
ಜೆಪ್ಪು ಬಲೆಗೆ ಸಿಲುಕಿ ಮೀನುಗಾರ ಸಾವು
ಸುರತ್ಕಲ್ ಡಿಸೆಂಬರ್ 22: ಮೀನುಗಾರಿಕೆ ಸಂದರ್ಭ ಜೆಪ್ಪು ಬಲೆ ಹರಡುತ್ತಿದ್ದಾಗ ಕಾಲಿಗೆ ಬಲೆ ಸಿಕ್ಕಿ ವ್ಯಕ್ತಿಯೊರ್ವರು ನೀರುಪಾಲಾದ ಘಟನೆ ಗುಡ್ಡೆ ಕೊಪ್ಲ ಸಮುದ್ರ ಕಿನಾರೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಲೋಕೇಶ್ ಕೋಟ್ಯಾನ್(40) ಎಂದು ಗುರುತಿಸಲಾಗಿದೆ. ಇವರು ಸಮುದ್ರ ದಡದಲ್ಲಿ ಮೀನುಗಾರಿಕೆ ಸಂದರ್ಭ ಬಲೆ ಬಿಡುತ್ತಿರುವಾಗ ಅಪ್ಪಳಿಸಿದ ಬೃಹತ್ ತೆರೆ ಅಪ್ಪಳಿಸಿದೆ. ಈ ಸಂದರ್ಭ ಜೆಪ್ಪು ಬಲೆ ಲೋಕೇಶ್ ಅವರ ಕಾಲಿಗೆ ಸಿಕ್ಕಿದ್ದು, ಬಿಡಿಸಲು ಯತ್ನಿಸಿದ ಸಂದರ್ಭ ನೀರಿನಲ್ಲಿ ಆಯತಪ್ಪಿ ಮುಳುಗಿದ್ದಾರೆ. ಇದೇ ಸಂದರ್ಭ ಸುರಕ್ಷತೆ ದೃಷ್ಠಿಯಿಂದ ಹಾಕಿಕೊಂಡಿದ್ದ ಟ್ಯೂಬ್ ಕೂಡ ಜಾರಿ ಹೋಗಿದ್ದರಿಂದ ಈ ದುರಂತ ಸಂಭವಿಸಿದೆ. ಆ ಕೂಡಲೇ ಅಲ್ಲೇ ಇದ್ದ ಮೀನುಗಾರರು ರಕ್ಷಣೆಗೆ ಧಾವಿಸಿ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿ ಆಗದೆ ಲೋಕೇಶ್ ಮೃತಪಟ್ಟಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.