LATEST NEWS
ಯೂಟ್ಯೂಬ್ ವೀವ್ಸ್ ಗಾಗಿ ವಿಮಾನವನ್ನೆ ಪತನ ಮಾಡಿದವನಿಗೆ 20 ವರ್ಷ ಜೈಲು ಶಿಕ್ಷೆ
ವಾಷಿಂಗ್ಟನ್ ಮೇ 13 : ಯೂಟ್ಯೂಬ್ ನಲ್ಲಿ ಲೈಕ್ಸ್, ವೀವ್ಸ್ ಗಾಗಿ ಜನ ಏನೆಲ್ಲಾ ಸರ್ಕಸ್ ಮಾಡುತ್ತಾರೆ ಎನ್ನುವುದಕ್ಕೆ ಇಂದೊಂದು ಉದಾಹರಣೆ. ಬರೀ ಯೂಟ್ಯೂಬ್ ವಿಡಿಯೋಗಾಗಿ ಇತ ಒಂದು ಪುಟ್ಟ ವಿಮಾನವನ್ನೇ ಪತನ ಮಾಡಿದ್ದಾನೆ. ಅಲ್ಲದೆ ಅದರ ವಿಡಿಯೋವನ್ನು ಅಪ್ಲೊಡ್ ಕೂಡ ಮಾಡಿದ್ದು, ಇದೀಗ 20 ಜೈಲು ಶಿಕ್ಷೆಗೆ ಗುರಿಯಾಗಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಕ್ಯಾಲಿಫೋರ್ನಿಯಾದ ಲೊಂಪೊಕ್‌ನ ಟ್ರೆವರ್ ಡೇನಿಯಲ್ ಜಾಕೋಬ್ (29) ಎಂಬಾತ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಅದರಲ್ಲಿ ಹೆಚ್ಚು ವೀವ್ಸ್ ಪಡೆಯಲು ನವೆಂಬರ್ 24, 2021 ರಂದು ತನ್ನ ವಿಮಾನವನ್ನು ಪತನ ಮಾಡಿದ್ದು, ಪ್ಯಾರಾಚೂಟ್ ನಲ್ಲಿ ಕೆಮರಾಗಳನ್ನು ಹಿಡಿದುಕೊಂಡು ಗಾಳಿಯಲ್ಲಿ ಜಾಕೋಬ್ ಹಾರಿದ್ದಾನೆ. ವಿಮಾನ ಒಣ ಪ್ರದೇಶದಲ್ಲಿ ಬಿದ್ದು ಪತನಗೊಂಡಿದೆ.
“ಐ ಕ್ರ್ಯಾಶ್ಡ್ ಮೈ ಏರ್‌ಪ್ಲೇನ್” ಎಂಬ ಶೀರ್ಷಿಕೆಯಡಿಯಲ್ಲಿ ಅಪಘಾತದ ವೀಡಿಯೊವನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ವೈರಲ್ ವಿಡಿಯೋದಿಂದ ಆತ ಹಣವನ್ನು ಪಡೆದುಕೊಂಡಿದ್ದಾನೆ. ಈ ವಿಮಾನ ಪತನದ ಬಗ್ಗೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ತನಿಖೆಯನ್ನು ಕೈಗೊಂಡಿದೆ.
ತನಿಖೆಯ ವೇಳೆ ತಾನು ವಿಮಾನವನ್ನು ಉದ್ದೇಶಪೂರ್ವಕವಾಗಿಯೇ ಪತನ ಮಾಡಿದ್ದೇನೆ. ಆ ಬಳಿಕ ಅವಶೇಷಗಳನ್ನು ನಾಶ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ತನಿಖೆಯ ಬಳಿಕ ಅಪಾಯವನ್ನುಂಟು ಮಾಡುವ ಕೃತ್ಯವೆಸದ ಟ್ರೆವರ್ ಡೇನಿಯಲ್ ಜಾಕೋಬ್ ಅವರಿಗೆ 20 ವರ್ಷ ಜೈಲು ಶಿಕ್ಷೆಯ ತೀರ್ಪನ್ನು ಅಲ್ಲಿನ ನ್ಯಾಯಾಲಯ ನೀಡಿದೆ ಎಂದು ವರದಿ ತಿಳಿಸಿದೆ.