Connect with us

LATEST NEWS

ರಸ್ತೆ ಅವ್ಯವಸ್ಥೆಗೆ ಬಸ್ ನಲ್ಲಿದ್ದ ವ್ಯಕ್ತಿಯ ಬೆನ್ನು ಮೂಳೆಯೇ ಮುರಿದು ಹೊಯ್ತು…!!

ಮಂಗಳೂರು: ಕಲ್ಲಡ್ಕದಲ್ಲಿ ರಸ್ತೆ ಅವ್ಯವಸ್ಥೆಯಿಂದಾಗಿ ವ್ಯಕ್ತಿಯೊಬ್ಬರು ಬೆನ್ನುಮೂಳೆ ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.


ವಿಜಯ್ ಕುಮಾರ್ ಬೆನ್ನು ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ. ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿಯಾಗಿರುವ ಇವರು, ಮೊಬೈಲ್ ಟೆಕ್ನೀಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಂತೆಯೇ ಇವರು ಮೊಬೈಲ್ ಬಿಡಿಭಾಗಕ್ಕಾಗಿ ಮಂಗಳೂರಿಗೆ ಬಂದಿದ್ದರು. ಮಂಗಳೂರಿನಿಂದ ಮತ್ತೆ ಬೆಳ್ಳಾರೆಗೆ ಹೋಗುವ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.


ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ಕಲ್ಲಡ್ಕ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಈ ರಾಷ್ಟ್ರೀಯ ಹೆದ್ದಾರಿ ಬೃಹತ್ ಗುಂಡಿಗಳಿಂದ ಕೂಡಿದೆ. ವ್ಯಕ್ತಿ ಬಸ್ಸಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಸರ್ಕಾರಿ ಬಸ್ ರಸ್ತೆ ಗುಂಡಿಗೆ ಬಿದ್ದಿದೆ. ಈ ವೇಳೆ ವಿಜಯ್ ಸೀಟಿನಿಂದ ಮೇಲೆ ಹಾರಿದ್ದಾರೆ. ಪರಿಣಾಮ ಬಸ್ಸಿನ ರಾಡ್ ತಾಗಿ ವಿಜಯ್ ಕುಮಾರ್ ಬೆನ್ನಿಗೆ ಗಂಭೀರ ಪೆಟ್ಟು ಬಿದ್ದಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯ್ ಅವರ ಬೆನ್ನು ಹುರಿ, ಕುತ್ತಿಗೆ ಭಾಗದ ಎಲುಬು ಜಖಂಗೊಂಡಿದೆ. ಬೆನ್ನು ಮೂಳೆ ಆಪರೇಷನ್ ಗೆ ವೈದ್ಯರು ಸೂಚಿಸಿದ್ದಾರೆ. ಸದ್ಯ ವಿಜಯ್ ಕುಮಾರ್ ಅವರು ಮಲಗಿದ ಸ್ಥಿತಿಯಲ್ಲೇ ಇದ್ದಾರೆ

Share Information
Advertisement
Click to comment

You must be logged in to post a comment Login

Leave a Reply