LATEST NEWS
ಮುಂಬೈ ಜೀವನಾಡಿ ಲೋಕಲ್ ಟ್ರೈನ್ ಗೆ ಶಿರಬಾಗಿ ನಮಿಸಿದ ಪ್ರಯಾಣಿಕ
ಮುಂಬೈ: ಕೊರೊನಾ ಲಾಕ್ ಡೌನ್ ನಂತರ ಇದೇ ಪ್ರಥಮ ಪ್ರಾರಂಭವಾದ ಮುಂಬೈ ಜೀವನಾಡಿ ಲೋಕಲ್ ಟ್ರೈನ್ ಗೆ ಪ್ರಯಾಣಿಕನೊಬ್ಬ ಶಿರಬಾಗಿ ನಮಿಸಿರುವ ಪೋಟೋ ಒಂದು ಈಗ ವೈರಲ್ ಆಗಿದೆ.
ಮುಂಬೈ ಮಹಾನಗರಿಯಲ್ಲಿ ಲೋಕಲ್ ಟ್ರೈನ್ ಗೆ ಅದರದ್ದೆ ಆದ ಮಹತ್ವ ಇದೆ, ಇಡೀ ಮುಂಬೈ ಮಹಾನಗರಿ ಜನಜೀವನ ಪ್ರಾರಂಭವಾಗುವುದೇ ಲೋಕಲ್ ಟ್ರೈನ್ ಮೂಲಕ. ಕೊರೊನಾ ಮಾಹಾಮಾರಿ ವಕ್ಕರಿಸಿದ ನಂತರ ಸ್ತಬ್ದವಾಗಿದ್ದ ಮುಂಬೈ ಲೋಕಲ್ ಟ್ರೈನ್ ಈಗ ಮತ್ತೆ ಸಂಚಾರ ಆರಂಭಿಸಿದೆ. ಫೆಬ್ರವರಿ 1 ರಂದು ವ್ಯಕ್ತಿಯೊಬ್ಬ ಲೋಕಲ್ ಟ್ರೈನ್ ಗೆ ನಮಸ್ಕರಿಸಿ ಒಳಹೋದ ವ್ಯಕ್ತಿ ಆ ದಿನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾನೆ. ಆ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಹಳಷ್ಟು ಮಂದಿ ಆ ವ್ಯಕ್ತಿಯ ಕುರಿತು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಮುಂಬೈನಲ್ಲಿ ಲೋಕಲ್ ಟ್ರೇನ್ನ ಮಹತ್ವವನ್ನೂ ಉಲ್ಲೇಖಿಸಿದ್ದಾರೆ.
ಈಗ 11 ತಿಂಗಳ ಬಳಿಕ ಕೊನೆಗೂ ರೈಲು ಸಂಚಾರ ಪುನಃ ಆರಂಭಗೊಂಡಿದ್ದಕ್ಕೆ ಈ ವ್ಯಕ್ತಿ ಹೀಗೆ ಶಿರಬಾಗಿದ್ದಾನೆ. ಉದ್ಯಮಿ ಆನಂದ್ ಮಹೀಂದ್ರ ಸೇರಿ ಹಲವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಮುಂಬೈನಲ್ಲಿ ಲೋಕಲ್ ಟ್ರೇನ್ಗಳಿಗೂ ಸಾರ್ವಜನಿಕರಿಗೂ ಇರುವ ಅನುಬಂಧದ ಅನಾವರಣವೂ ಆಗಿದೆ ಎಂದು ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.