BANTWAL
ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಪೋಸ್ಟ್ – ಯುವಕನಿಗೆ ನಾಯಾಂಗ ಬಂಧನ
ಪುಂಜಾಲಕಟ್ಟೆ, ಸೆಪ್ಟೆಂಬರ್ 22: ರಾಜಕೀಯ ವ್ಯಕ್ತಿಗಳ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸುತ್ತಿದ್ದ ಆರೋಪದ ಮೇಲೆ ವಾಮದಪದವು ನಿವಾಸಿಯೋರ್ವರಿಗೆ ಬಂಟ್ವಾಳ ತಾಲೂಕು ದಂಡಾಧಿಕಾರಿ ಡಾ. ಸ್ಮಿತಾರಾಮು ಅವರು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.
ಈತ ಸೋಶಿಯಲ್ ಮಿಡಿಯಾದಲ್ಲಿ ಕಳೆದ ಹಲವು ದಿನಗಳಿಂದ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡುತ್ತಿದ್ದ, ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಪುಂಜಾಲಕಟ್ಟೆ ಪೊಲೀಸರು ಕಳೆದ ಫೆಬ್ರವರಿ ತಿಂಗಳಿನಲ್ಲಿ ಈತನ ಮೇಲೆ ತಹಶೀಲ್ದಾರ್ ಅವರಿಗೆ ಪಿ.ಎ.ಆರ್. ವರದಿಯೊಂದನ್ನು ಸಲ್ಲಿಸಿದ್ದರು. ಈತನ ಮೇಲೆ ಇಂತಹ 5 ಪ್ರಕರಣಗಳಿದ್ದು, ಮುಂದಿನ ದಿನಗಳಲ್ಲಿ ಈತ ಯಾವುದೇ ರೀತಿಯ ಸಮಾಜದ ಹಿತ ಕಾಯುವ ದೃಷ್ಟಿಯಿಂದ ಯಾವುದೇ ಪೋಸ್ಟ್ ಗಳನ್ನು ಹಾಕದಂತೆ ಮುಚ್ಚಳಿಕೆ ಬರೆಸುವಂತೆ ಪುಂಜಾಲಕಟ್ಟೆ ಎಸ್. ಐ.ಸುತೇಶ್ ತಹಶೀಲ್ದಾರ್ ಅವರಿಗೆ ಪಿ.ಎ.ಅರ್.ಸಲ್ಲಿಸಿದ್ದರು.
ಅ ಬಳಿಕವೂ ಈತ ತನ್ನ ಚಾಳಿಯನ್ನು ಮುಂದುವರಿಸಿದ್ದಲ್ಲದೆ, ತಾಲೂಕು ದಂಡಾಧಿಕಾರಿ ಕೋರ್ಟಿನಲ್ಲಿ ಪ್ರಕರಣವೊಂದರ ತನಿಖಾ ಹಂತದಲ್ಲಿರುವಾಗಲೇ ಈತ ಮತ್ತೊಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆಂಬ ದೂರಿನ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿಯವರ ಮುಂದೆ ಮುಚ್ಚಳಿಕೆ ನೀಡುವಂತೆ ಸೂಚಿಸಲಾಗಿತ್ತು.ಆದರೆ ಈತ ಇದನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಈತನಿಗೆ 5 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.