Connect with us

    LATEST NEWS

    ಮೋದಿ 15 ಲಕ್ಷದ ಮೊದಲ ಕಂತು ಕಳಿಸಿದ್ದಾರೆಂದು ₹5.5 ಲಕ್ಷ ಖರ್ಚು ಮಾಡಿದ ಭೂಪ!

    ಪಾಟ್ನಾ, ಸೆಪ್ಟೆಂಬರ್ 16 : ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಣವನ್ನು ಹಂತ ಹಂತವಾಗಿ ಹಾಕಿದ್ದಾರೆ ಎಂದು ತಪ್ಪು ತಿಳಿದುಕೊಂಡ ವ್ಯಕ್ತಿಯೊಬ್ಬ ಬ್ಯಾಂಕ್ ಸಿಬ್ಬಂದಿ ತಪ್ಪಿನಿಂದ ತನ್ನ ಖಾತೆಗೆ ಜಮಾ ಆಗಿದ್ದ 5.5 ಲಕ್ಷ ಹಣವನ್ನು ಖರ್ಚು ಮಾಡಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

    ಬಿಹಾರದಲ್ಲಿ ಬ್ಯಾಂಕ್‌ ಸಿಬ್ಬಂದಿ ತಪ್ಪಿನಿಂದಾಗಿ ಬೇರೆ ವ್ಯಕ್ತಿ ಖಾತೆಗೆ 5.5 ಲಕ್ಷ ರೂ. ಜಮೆಯಾಗಿದ್ದು, ಇಷ್ಟೂ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿದ್ದಾರೆ ಎಂದು ಆತ ಖರ್ಚು ಮಾಡಿದ್ದಾನೆ. ಸಿಕ್ಕಾಪಟ್ಟೆ ಖುಷಿಯಿಂದ ಖರ್ಚು ಮಾಡಿ ಮುಂದಿನ ಕಂತಿನ ಹಣ ಬರುವುದಕ್ಕಾಗಿ ಕಾಯುತ್ತಿದ್ದ ಆತನಿಗೆ ಶಾಕ್ ಕಾದಿತ್ತು.

    ಖಗಾರಿಯಾದ ಗ್ರಾಮೀಣ ಬ್ಯಾಂಕ್‌ನಿಂದ ತಪ್ಪಾಗಿ ಬಖ್ತಿಯಾರ್‌ ಪುರದ ರಂಜಿತ್‌ ದಾಸ್‌ ಅವರ ಖಾತೆಗೆ 5.5 ಲಕ್ಷ ರೂ. ಜಮೆಯಾಗಿದೆ. ಇದಾದ ಬಳಿಕ ಬ್ಯಾಂಕ್‌ ಸಿಬ್ಬಂದಿ ಹಣ ಹಿಂದಿರುಗಿಸುವಂತೆ ನೋಟಿಸ್‌ ನೀಡಿದರೂ ದಾಸ್‌ ಅವರು ಹಣ ವಾಪಸ್‌ ನೀಡಿಲ್ಲ. ನೋಟಿಸ್‌ಗು ಪ್ರತಿಕ್ರಿಯಿಸಿಲ್ಲ. ಕೊನೆಗೆ ಪೊಲೀಸರು ಇವರನ್ನು ಬಂಧಿಸಿದ್ದಾರೆ.

    ನರೇಂದ್ರ ಮೋದಿ ಅವರು ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮೆ ಮಾಡುತ್ತಿದ್ದು, ಮೊದಲ ಹಂತವಾಗಿ ಇಷ್ಟು ಹಣ ಜಮೆಯಾಗಿದೆ ಎಂದು ಭಾವಿಸಿದೆ. ಹಾಗೆಯೇ ಭಾವಿಸಿ ಎಲ್ಲ ಹಣ ಖರ್ಚು ಮಾಡಿದ್ದು, ಈಗ ನನ್ನ ಬಳಿಯಾಗಲಿ, ಬ್ಯಾಂಕ್‌ ಖಾತೆಯಲ್ಲಾಗಲಿ ಹಣವಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply