Connect with us

LATEST NEWS

ಟಾಯ್ಲೆಟ್ ನೊಳಗೆ ಕುಳಿತು ಗುಜರಾತ್ ಹೈಕೋರ್ಟ್ ವಿಚಾರಣೆಗೆ ಹಾಜರಾದ ವ್ಯಕ್ತಿ!

ಅಹಮದಾಬಾದ್, ಜೂನ್ 27: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ವಿಚಾರಣೆ ವೇಳೆ ವ್ಯಕ್ತಿಯೊಬ್ಬ ಟಾಯ್ಲೆಟ್ ನೊಳಗೆ ಕುಳಿತು ವಿಡಿಯೋ ಕಾನ್ಸರೆನ್ಸ್ ಮೂಲಕ ಹಾಜರಾದ ಘಟನೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“ಸಮದ್ ಬ್ಯಾಟರಿ” ಎಂಬ ಯೂಸರ್ ನೇಮ್ ನಲ್ಲಿ ಝೂಮ್ ನಲ್ಲಿ ಲಾಗಿನ್ ಆಗಿದ್ದ ವ್ಯಕ್ತಿ ಜಸ್ಟೀಸ್ ನಿರ್ಜರ್ ಎಸ್.ದೇಸಾಯಿ ಅವರ ಮುಂದೆ ವಿಚಾರಣೆಗೆ ಹಾಜರಾಗಿದ್ದ. ಆದರೆ ವಿಡಿಯೋದಲ್ಲಿ ಈ ವ್ಯಕ್ತಿ ಟಾಯ್ಲೆಟ್ ಸೀಟ್ ನಲ್ಲಿ ಕುಳಿತು, ಕಿವಿಗೆ ಇಯರ್ ಫೋನ್ ಹಾಕಿಕೊಂಡಿರುವುದು ಸೆರೆಯಾಗಿದೆ. ಅಷ್ಟೇ ಅಲ್ಲ ತನ್ನ ಫೋನ್ ಅನ್ನು ವೈಡ್ ಆಂಗಲ್ ವೀವ್ ನಲ್ಲಿ ಕಾಣಿಸುವಂತೆ ಇಟ್ಟಿರುವುದರಿಂದ ಈತ ಟಾಯ್ಲೆಟ್ ನಲ್ಲಿ ಕುಳಿತಿರುವುದು ಬಹಿರಂಗವಾಗಿತ್ತು.

ನ್ಯಾಯಾಲಯವು ಸಮದ್ ಕುರಿತ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿತ್ತು. ಇದರಲ್ಲಿ ಈತ ಕ್ರಿಮಿನಲ್ ವಿಚಾರಣೆಯಲ್ಲಿ ಆರೋಪಿಯಾಗಿದ್ದು ತನ್ನ ವಿರುದ್ಧದ ಎಫ್ ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಪ್ರತಿವಾದಿಯಾಗಿ ವಿಚಾರಣೆಗೆ ಹಾಜರಾಗಿದ್ದ ಎಂದು ವರದಿಯಾಗಿದೆ.

ಟಾಯ್ಲೆಟ್ ನಲ್ಲಿ ಕುಳಿತು ವಿಚಾರಣೆಗೆ ಹಾಜರಾದ ಈ ವ್ಯಕ್ತಿಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಲ್ಲಿ ಬಳಕೆದಾರ, ಕಾನೂನು ವಿದ್ಯಾರ್ಥಿ ರೋಹಿತ್ ಗುಪ್ತಾ ಎಂಬವರು, ಈ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು. ಇಂತಹ ಘಟನೆಗಳು ಜಾಗತಿಕ ಅವಮಾನಕ್ಕೆ ಎಡೆಮಾಡಿಕೊಡುತ್ತದೆ. ಹೀಗೆ ನಡೆದುಕೊಳ್ಳಲು ಈತನಿಗೆ ಕಾನೂನಿನ ಯಾವ ಭಯವೂ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *