LATEST NEWS
ಮಂಗಳೂರು ಪೊಲೀಸರ ದನಗಳ್ಳರ ಬೇಟೆಗೆ ಬಿದ್ದ ಕುಖ್ಯಾತ ದನಗಳ್ಳ ಅಹಮ್ಮದ್ ಕಬೀರ್
ಮಂಗಳೂರು ಪೊಲೀಸರ ದನಗಳ್ಳರ ಬೇಟೆಗೆ ಬಿದ್ದ ಕುಖ್ಯಾತ ದನಗಳ್ಳ ಅಹಮ್ಮದ್ ಕಬೀರ್
ಮಂಗಳೂರು ಆಗಸ್ಟ್ 03: ಮಂಗಳೂರು ನಗರದ ಮಹಾಲಿಂಗೇಶ್ವರ ದೇವಾಲಯದ ದನಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಕಸಬಾ ಬೆಂಗ್ರೆ ನಿವಾಸಿ ಅಹಮ್ಮದ್ ಕಬೀರ್ ಅಲಿಯಾಸ್ ಬೆಂಗ್ರೆ ಕಬೀರ್(30) ಎಂದು ಗುರುತಿಸಲಾಗಿದೆ.
ಜುಲೈ 05 ರಂದು ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಪಾಂಡೇಶ್ವರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ 2 ದನ ಹಾಗೂ ಒಂದು ಕರುವನ್ನು ಹಾಡು ಹಗಲೇ ಅಪಹರಿಸಲಾಗಿತ್ತು. ಮಂಗಳೂರು ಪೊಲೀಸ್ ಕಮಿಷನರ್ ಅವರ ನಿವಾಸದ ಪಕ್ಕದಲ್ಲಿ ಹಾಗು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಹಿಂದೆ ನಡೆದ ಈ ದನಗಳ್ಳತನ ಪ್ರಕರಣ ನಗರದ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿತ್ತು. ಈ ಬಗ್ಗೆ ಭಾರೀ ಆಕ್ರೋಶ ಕೂಡ ವ್ಯಕ್ತವಾಗಿತ್ತು.
ಈ ಘಟನೆಯ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿ ಅಬ್ದುಲ್ ಕಬೀರ್ ಯಾನೆ ಪಾರಿವಾಳ ಕಬೀರ್ ಎಂಬಾತನನ್ನು ಇತ್ತೀಚೆ ಗೆ ಬಂಧಿಸಿದ್ದರು. ಆತನಿಂದ ಕಳ್ಳತನ ಮಾಡಿದ 2 ದನ ಹಾಗೂ ಕರುವನ್ನು ಸಾಗಾಟ ಮಾಡಲು ಉಪಯೋಗಿಸಿದ ಬಿಳಿ ಬಣ್ಣದ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದರು.
ಈ ಪ್ರಕರಣದಲ್ಲಿ ಭಾಗಿಯಾದ ತಲೆ ಮರೆಸಿಕೊಂಡಿದ್ದ ಕುಖ್ಯಾತ ದನಗಳ್ಳ ಅಹಮ್ಮದ್ ಕಬೀರ್ ನನ್ನು ಈಗ ಸಿಸಿಬಿ ಪೊಲೀಸರು ಬಂದಿಸಿದ್ದಾರೆ.