Connect with us

    LATEST NEWS

    ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಗಸ್ಟ್ 29 ರಂದು ಮತದಾನ

    ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಗಸ್ಟ್ 29 ರಂದು ಮತದಾನ

    ಉಡುಪಿ ಆಗಸ್ಟ್ 3: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳಾಪಟ್ಟಿಯಂತೆ ಆಗಸ್ಟ್ 10 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಆಗಸ್ಟ್ 17 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಆಗಸ್ಟ್ 18 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಆಗಸ್ಟ್ 20 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದೆ.

    ಆಗಸ್ಟ್ 29 ರಂದು ಬೆಳಗ್ಗೆ 7 ರಿಂದ ಸಂಜೆ 5 ರ ವರೆಗೆ ಮತದಾನ ನಡೆಯಲಿದ್ದು, ಸೆಪ್ಟಂಬರ್ 1 ರಂದು ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಉಡುಪಿ ನಗರಸಭೆಯ 35 ವಾರ್ಡ್ ಗಳಲ್ಲಿ 98500 ಮತದಾರರು, ಸಾಲಿಗ್ರಾಮ ಪಟ್ಟಣ ಪಂಚಾಯತ್ ನ 16 ವಾರ್ಡ್ ಗಳಲ್ಲಿ 13201 ಮತದಾರರು, ಕಾರ್ಕಳ ಪುರಸಭೆಯ 23 ವಾರ್ಡ್ ಗಳಲ್ಲಿ 20471 ಮತದಾರರು, ಕುಂದಾಪುರ ಪುರಸಭೆಯ 23 ವಾರ್ಡ್ ಗಳಲ್ಲಿ 23164 ಮತದಾರರಿದ್ದು, ಒಟ್ಟು 97 ವಾರ್ಡ್ ಗಳಲ್ಲಿ 155336 ಮತದಾರರಿದ್ದು, ಜೂನ್ 27 ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಲ್ಲಿ ಅರ್ಹ ಸಾರ್ವಜನಿಕರ ಹೆಸರು ಸೆರ್ಪಡೆಯಾಗದಿದ್ದಲ್ಲಿ ಅವರು ತಮ್ಮ ಹೆಸರನ್ನು , ನಾಮಪತ್ರ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕದವರೆಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೊಂದಣಿ ಮಾಡಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಉಡುಪಿಯಲ್ಲಿ 99, ಕುಂದಾಪುರದಲ್ಲಿ 23, ಕಾರ್ಕಳದಲ್ಲಿ 23 ಮತ್ತು ಸಾಲಿಗ್ರಾಮದಲ್ಲಿ 16 ಸೇರಿದಂತೆ ಒಟ್ಟು 161 ಮತಗಟ್ಟೆಗಳಿದ್ದು, ಇದರಲ್ಲಿ 2 ಅತಿಸೂಕ್ಷ್ಮ,55 ಸೂಕ್ಷ್ಮ ಮತಗಟ್ಟೆಗಳಿವೆ, ಇವಿಎಂ ಮೂಲಕ ಚುನಾವಣೆ ನಡೆಯಲಿದ್ದು, ಪ್ರತಿ ಮಗಟ್ಟೆಗೆ ಅಗತ್ಯವಿರುವ ಇವಿಎಂ ಗಳ ಸರಬರಾಜು ಆಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

    ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನೇಮಕ ಮಾಡಲಾಗಿದ್ದು, ಚುನಾವಣೆ ನಡೆಯುವ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ತಕ್ಷಣದಿಂದ ಜಾರಿಯಲ್ಲಿದ್ದು, ಸೆಪ್ಟಂಬರ್ 1 ರ ವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply