LATEST NEWS
ಮಲ್ಪೆ ಬೀಚ್ ನಲ್ಲಿ ಗಂಗಾಮಾತೆ ಕೂದಲು….!!

ಉಡುಪಿ ಜೂನ್ 21 : ಭಿಪರ್ ಜಾಯ್ ಚಂಡಮಾರುತದ ಬಳಿಕ ಇದೀಗ ಸಮುದ್ರ ತೀರಕ್ಕೆ ವಿಚಿತ್ರ ವಸ್ತುಗಳು ತೇಲಿ ಬರುತ್ತಿದೆ. ಮಲ್ಪೆ ಬೀಚ್ ನಲ್ಲಿ ಅಪರೂಪಗ ಬಿಳಿ ಬಣ್ಣ ತ್ಯಾಜ್ಯವೊಂದು ತೇಲಿ ಬಂದಿದೆ. ಶ್ಯಾವಿಗೆಯಂತಿರುವ ಪದಾರ್ಥ ಸುಮಾರು ಎರಡು ದಶಕದ ನಂತರ ಇಲ್ಲಿನ ಸಮುದ್ರ ತೀರದಲ್ಲಿ ಕಾಣಿಸಿಕೊಂಡಿದೆ.
ಸಮುದ್ರದ ಅಲೆಗಳು ಈ ವಿಚಿತ್ರ ವಸ್ತುವನ್ನು ಹೊತ್ತು ತಂದು ತೀರಕ್ಕೆ ಹಾಕುತ್ತಿದ್ದು ಆಡುಮಾತಿನಲ್ಲಿ ಇದನ್ನು ಗಂಗಾಮಾತೆಯ ಕೂದಲು ಎಂದು ಕರೆಯುತ್ತಾರೆ. ಶ್ಯಾವಿಗೆ ರೀತಿಯಲ್ಲಿರುವ ಎಳೆ ಎಳೆಯಾದ ಬಿಳಿ ಬಣ್ಣದ ಈ ಕಸದ ರಾಶಿಯನ್ನು ಸ್ಥಳೀಯರು ಗಂಗಾದೇವಿಯ ಕೂದಲು ಎಂದು ಕರೆಯುತ್ತಾರೆ. ಇದು ಸುಮಾರು 10 ವರ್ಷದ ಹಿಂದೆ ಕಾಣಸಿಗುತ್ತಿದ್ದು, ಈ ಬಾರಿ ಯಥೇಚ್ಚವಾಗಿ ಬಿದ್ದಿದೆ ಎನ್ನುತ್ತಾರೆ ಹಿರಿಯರು. ಇದನ್ನು ತೆರವುಗೊಳಿಸುವ ಹಾಗಿಲ್ಲ, ಜೋರಾದ ಅಲೆಗೆ ಮತ್ತೆ ಸಮುದ್ರವನ್ನು ಸೇರಿಕೊಳ್ಳುತ್ತದೆ.

ಇದು ಸಮುದ್ರದಲ್ಲಿ ಕೊಳೆತು ಮೀನುಗಳಿಗೆ ಆಹಾರವಾಗುತ್ತದೆ. 10 ವರ್ಷಗಳ ಹಿಂದೆ ಕಡಲತೀರದಲ್ಲಿ ಕಂಡ ಬಂದ ಗಂಗಾದೇವಿಯ ಕೂದಲು ಎನ್ನಲಾದ ಈ ರಾಶಿಯಲ್ಲಿ ಒಂದೇ ಒಂದು ಪ್ಲಾಸ್ಟಿಕ್ ಬಾಟಲಿ ಕಾಣ ಸಿಕ್ಕಿರಲಿಲ್ಲ. ಆದರೆ ಇದೀಗ ಇದರಲ್ಲಿ ಲಾರಿಗಟ್ಟಲೆ ಪ್ಲಾಸ್ಟಿಕ್ ಬಾಟಲಿ ಕಂಡು ಬಂದಿರುವುದು ಸಮುದ್ರ ಎಷ್ಟು ಕಲುಷಿತಗೊಂಡಿದೆ ಎನ್ನುವುದಕ್ಕೆ ಉದಾಹರಣೆ.