LATEST NEWS
ಮಲೇಷ್ಯಾ – ಆಗಸದಲ್ಲೆ ಮುಖಾಮುಖಿ ಡಿಕ್ಕಿಯಾದ ಹೆಲಿಕಾಪ್ಟರ್ – 10 ಮಂದಿ ಸಾವು

ಮಲೇಷ್ಯಾ ಎಪ್ರಿಲ್ 23: ಮಲೇಷ್ಯಾ ನೌಕಾಪಡೆಯ ಎರಡು ಹೆಲಿಕಾಪ್ಟರ್‌ಗಳು ಹಾರಾಟದ ವೇಳೆ ಆಗಸದಲ್ಲೇ ಪರಸ್ಪರ ಡಿಕ್ಕಿ ಹೊಡೆದು ಪತನವಾದ ಘಟನೆ ನಡೆದಿದ್ದು, ಇದರಲ್ಲಿ 10 ಮಂದಿ ಸಾವನಪ್ಪಿದ್ದಾರೆ.
ಪೆರಾಕ್ನ ಲುಮುಟ್ನಲ್ಲಿ ಎರಡು ರಾಯಲ್ ಮಲೇಷಿಯನ್ ನೌಕಾಪಡೆಯ ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿದ್ದು, 10 ಮಂದಿ ಸಾವನ್ನಪ್ಪಿದ್ದಾರೆ. ಫ್ರೀ ಮಲೇಷ್ಯಾ ಟುಡೇ ವರದಿ ಪ್ರಕಾರ, ಪೆರಾಕ್ ಅಗ್ನಿಶಾಮಕ ಮತ್ತು ಪಾರುಗಾಣಿಕಾ ಇಲಾಖೆ ಈ ಘಟನೆಯನ್ನು ದೃಢಪಡಿಸಿದೆ. ಸ್ಥಳದಲ್ಲೇ 10 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೃತದೇಹಗಳನ್ನು ಹೆಲಿಕಾಪ್ಟರ್ಗಳಿಂದ ಹೊರ ತೆಗೆಯುವ ಕಾರ್ಯಾಚರಣೆ ಮುಂದುವರೆದಿದೆ.
