FILM
ಮಲೆಯಾಳಂ ಸೂಪರ್ ಹಿಟ್ ಸಿನೆಮಾ ನಿರ್ದೇಶಕ ಗಾಂಜಾ ಕೇಸ್ ನಲ್ಲಿ ಅರೆಸ್ಟ್

ಕೊಚ್ಚಿ ಎಪ್ರಿಲ್ 27: ಮಲೆಯಾಳಂ ಸಿನೆಮಾದಲ್ಲಿ ಸೂಪರ್ ಹಿಟ್ ಸಿನೆಮಾಗಳ ನಿರ್ದೇಶಕ ಖಾಲೀದ್ ರೆಹಮಾನ್ ಗಾಂಜಾ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರೇ ನಿರ್ದೇಶಿಸಿದ ಆಲಪ್ಪುಳ ಜಿಮ್ಖಾನಾ ಸಿನೆಮಾ ಈಗ ಪ್ರದರ್ಶನವಾಗುತ್ತಿದೆ.
ಖಾಲೀದ್ ರೆಹಮಾನ್ ಹಾಗೂ ಆಶ್ರಫ್ ಹಮ್ಜಾ ಬಂಧಿತ ಬಂಧಿತ ಆರೋಪಿಗಳಾಗಿದ್ದಾರೆ. ಇಬ್ಬರ ಬಳಿಯಿದ್ದ ಹೈಬ್ರೀಡ್ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗೌಪ್ಯ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಇಂದು ಬೆಳಗಿನ ಜಾವ 2:30 ರ ಸುಮಾರಿಗೆ ನಿರ್ದೇಶಕರನ್ನು ಬಂಧನಕ್ಕೊಳಪಡಿಸಿದ್ದಾರೆ.

ಆಲಪ್ಪುಳ ಜಿಮ್ಖಾನಾ ಮತ್ತು ತಲ್ಲುಮಾಲಾದಂತಹ ಸಿನಿಮಾಗಳನ್ನು ನಿರ್ದೇಶಿಸಿದ ಮತ್ತು ಮಂಜುಮಲ್ ಬಾಯ್ಸ್ ಚಿತ್ರದಲ್ಲಿ ನಟಿಸಿದ್ದ ರೆಹಮಾನ್, ತಮಾಶಾ, ಭೀಮಂತೆ ವಾಝಿ ಮತ್ತು ಸುಲೈಖಾ ಮಂಜಿಲ್ ಚಿತ್ರದ ನಿರ್ದೇಶಕ ಹಮ್ಜಾ ಮನೆಗಳ ಮೇಲೆ ದಾಳಿ ನಡೆಸಿದಾಗ ಗಾಂಜಾ ಪತ್ತೆಯಾಗಿದ್ದು, ನಂತಹ ಇಬ್ಬರು ನಿರ್ದೇಶಕರು ಸೇರಿ ಹಲವರನ್ನು ಬಂಧನಕ್ಕೊಳಪಡಿಸಲಿದ್ದಾರೆಂದು ತಿಳಿದುಬಂದಿದೆ. ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ, ಕೊಚ್ಚಿಯ ಗೋರ್ಸಿ ಬ್ರಿಡ್ಜ್ ಮೇಲೆ ದಾಳಿ ಮಾಡಿದಾಗ ಗಾಂಜಾ ಇರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ರೆಹಮಾನ್ ಮತ್ತು ಹಮ್ಜಾ ನಿಯಮಿತ ಮಾದಕ ದ್ರವ್ಯ ಬಳಕೆದಾರರು ಎಂದು ಅಬಕಾರಿ ಇಲಾಖೆ ದೃಢಪಡಿಸಿದೆ.