LATEST NEWS
ಮಳಲಿ ಮಸೀದಿ ಜಾಗವನ್ನು ಹಿಂದೂಗಳಿಗೆ ಬಿಟ್ಟುಕೊಡಿ – ಶರಣ್ ಪಂಪ್ ವೆಲ್

ಮಂಗಳೂರು ಮೇ 25: ಹಿಂದೆ ದೇವಾಲಯ ಇತ್ತು ಎಂಬ ಉತ್ತರ ತಾಂಬೂರ ಪ್ರಶ್ನೆ ವೇಳೆ ಬಂದ ಹಿನ್ನಲೆ ಮಳಲಿ ಮಸೀದಿಯನ್ನು ಹಿಂದೂಗಳಿಗೆ ಬಿಟ್ಟುಕೋಡಬೇಕೆಂದು ವಿಹೆಚ್‌ಪಿ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಳಲಿ ಮಸೀದಿ ಕಮಿಟಿಯವರನ್ನು ಒತ್ತಾಯಿಸಿದ್ದಾರೆ.
ನವೀಕರಣದ ವೇಳೆ ದೇವಾಲಯದ ಮಾದರಿ ರಚನೆ ಪತ್ತೆಯಾದ ಹಿನ್ನೆಲೆಯಲ್ಲಿ ಇಂದು ನಡೆದ ತಾಂಬೂಲ ಪ್ರಶ್ನೆ ಬೆಳಗ್ಗೆ 8 ಗಂಟೆಯಿಂದ ರಾಮಾಂಜನೇಯ ಭಜನಾ ಮಂದಿರದಲ್ಲಿ ನಡೆದಿತ್ತು. ಈ ವೇಳೆ ಕೇರಳ ದೈವಜ್ಞರು ಸ್ಥಳದಲ್ಲಿ ಈ ಹಿಂದೆ ದೇವದಾಲಯವಿತ್ತು, ವಿವಾದದಿಂದ ದೇವಾಲಯ ನಾಶಪಡಿಸಲಾಗಿದೆ, ದೇವಸ್ಥಾನ ಮರುಸ್ಥಾಪಿಸಬೇಕೆಂದು ಹೇಳಿದ್ದಾರೆ.

ಈ ಹಿ ನ್ನಲೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶರಣ್ ಪಂಪ್ ವೆಲ್ ಜ್ಯೋತಿಷಿ ಗೋಪಾಲ ಕೃಷ್ಣ ಪಣಿಕ್ಕರ್ ಅವರು ನಡೆಸಿದ ತಾಂಬೂಲ ಪ್ರಶ್ನೆಯಲ್ಲಿ ಇಲ್ಲಿ ದೇವತಾ ಸಾನಿಧ್ಯ ಇತ್ತು. ಅದರಲ್ಲೂ ಶಿವ ಸಾನಿಧ್ಯವಿತ್ತು. ಸಾವಿರಾರು ವರ್ಷದ ಹಿಂದೆ ಅಲ್ಲಿ ದೇವರನ್ನು ಆರಾಧನೆ ಮಾಡುತ್ತಿದ್ದರು. ಇದು ಕಂಡುಬಂದಿದೆ. ಹಾಗಾಗಿ ಅದನ್ನು ನಮಗೆ ಬಿಟ್ಟುಕೊಡಿ ಎಂದು ಮುಸಲ್ಮಾನ ಮುಖಂಡರು ಹಾಗೂ ಮಸೀದಿ ಕಮಿಟಿಯವರಿಗೆ ವಿನಂತಿ ಮಾಡುತ್ತಿದ್ದೇನೆ ಎಂದು ಹೇಳಿದರು.