LATEST NEWS
ಮಂಗಳೂರಿನಲ್ಲಿ ಸಂಭ್ರಮದ ಶಿವರಾತ್ರಿ

ಮಂಗಳೂರಿನಲ್ಲಿ ಸಂಭ್ರಮದ ಶಿವರಾತ್ರಿ
ಮಂಗಳೂರು ಫೆಬ್ರವರಿ 14: ಮಂಗಳೂರಿನಲ್ಲಿ ಭಕ್ತವೃಂದ ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.
ಜಿಲ್ಲೆಯ ಪ್ರಸಿದ್ದ ಕುದ್ರೋಳಿ ದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಭಕ್ತರು ಈಶ್ವರನ ಧ್ಯಾನ ಮಾಡುತ್ತಾ, ಉಪವಾಸ, ಜಾಗರಣೆ ಮಾಡಿದರು.
ಶಿವರಾತ್ರಿ ಹಿನ್ನಲೆಯಲ್ಲಿ ಮಂಗಳೂರಿನ ಎಲ್ಲಾ ಶಿವ ದೇವಸ್ಥಾನಗಳಲ್ಲಿ ಭಕ್ತರು ತುಂಬಿ ತುಳುಕಿದ್ದವು, ಎಲ್ಲರೂ ಶಿವನಾಮದಲ್ಲಿ ತಲ್ಲೀನರಾಗಿದ್ದಾರೆ. ನಗರದ ಹೆಸರಾಂತ ಶಿವಕ್ಷೇತ್ರವಾದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಶಿವನಿಗೆ ವಿಶೇಷ ಪೂಜೆ ಹಾಗೂ ರಥೋತ್ಸವ ನಡೆಯಿತು. ದಿನಪೂರ್ತಿ ನಡೆಯುವ ಜಾಗರಣೆಯಲ್ಲೂ ಭಕ್ತಾಧಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.

ಶಿವರಾತ್ರಿ ಹಿನ್ನಲೆಯಲ್ಲಿ ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನವನ್ನು ವಿಶೇಷ ವಿದ್ಯುತ್ ಅಲಂಕಾರದಿಂದ ಶೃಂಗರಿಸಲಾಗಿದ್ದು, ಸಾವಿರ ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಶಿವರಾತ್ರಿ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಭಜನೆಯನ್ನು ಆಯೋಜಿಸಲಾಗಿತ್ತು.